alex Certify
ಕನ್ನಡ ದುನಿಯಾ       Mobile App
       

Kannada Duniya

ಕಂಪ್ಯೂಟರ್ ಕೈ ಕೊಟ್ಟ ಪರಿಣಾಮ ಪ್ರಯಾಣಿಕರ ಪರದಾಟ

ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂಪ್ಯೂಟರ್ ಕೈ ಕೊಟ್ಟಿದ್ದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿನ್ನೆ ನಡೆದಿದೆ.

ಪ್ರಯಾಣಿಕರು ಫ್ಲೈಟ್ ಹತ್ತುವ ಮುನ್ನ ಚೆಕ್ ಇನ್ ಮಾಡಿಕೊಳ್ಳಲಾಗುತ್ತದೆ. ಚೆಕ್ ಇನ್ ಕಂಪ್ಯೂಟರ್ ಕೈ ಕೊಟ್ಟಿದ್ದರಿಂದ, ಸಿಬ್ಬಂದಿಗಳಿಗೆ ಹೆಚ್ಚಿನ ಹೊರೆ ಆಗಿದೆ. ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಲು ಸಮಯ ಹಿಡಿಯಿತು. ಪರಿಣಾಮ ವಿಮಾನ ಹಾರಾಟ ಸಹ ಒಂದು ಗಂಟೆ ತಡವಾಗಿದೆ.

ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ ಭಾರತದ ಎರಡನೇ ಅತಿ ದೊಡ್ಡ ಏರ್ ಪೋರ್ಟ್ ಎಂಬ ಹೆಗ್ಗಳಿಕೆ ಹೊಂದಿದೆ. ಅಲ್ಲದೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಮುಂಬೈನಲ್ಲಿ ವಿಮಾನ ಯಾನಿಗಳ ಸಂಖ್ಯೆ ಏರುತ್ತಿದ್ದು, ನವಿ ಮುಂಬೈನಲ್ಲಿ ಮತ್ತೊಂದು ನಿಲ್ದಾಣ ಮಾಡುವ ಕಾರ್ಯ ನಡೆದಿದೆ. ಈ ಏರ್ ಪೋರ್ಟ್ ನಿಂದ ಮುಂದಿನ ವರ್ಷ ವಿಮಾನ ಹಾರಾಟ ನಡೆಸಬಹುದು ಎಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...