alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಉಪಾಯ ಮಾಡಿದ್ರೆ ಉಳಿಯುತ್ತೆ 250 ಕೋಟಿ ರೂಪಾಯಿ

ದೇಶದ ರಾಜಧಾನಿ ದೆಹಲಿಯ ಪ್ರತಿ ಸಿಗ್ನಲ್‌ಗಳಲ್ಲಿ ವರ್ಷಕ್ಕೆ 250 ಕೋಟಿ ರೂ. ಉಳಿಸಬಹುದು! ಇದಕ್ಕೆ ಮಾಡಬೇಕಾಗಿರುವುದೇನು ಗೊತ್ತಾ? ಪ್ರತಿ ವಾಹನ ಸವಾರರು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ತಮ್ಮ ವಾಹನವನ್ನು ಆಫ್ ಮಾಡಬೇಕಷ್ಟೆ.

ಪೆಟ್ರೋಲಿಯಂ ಕನ್ಸರ್ವೇಶನ್ ಆಂಡ್ ರಿಸರ್ಚ್ ಅಸೋಸಿಯೇಶನ್ (ಪಿಸಿಆರ್‌ಎ) ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್- ಸೆಂಟ್ರಲ್ ರೋಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಎಸ್ಐಆರ್- ಸಿಆರ್‌ಆರ್‌ಐ) ಜಂಟಿಯಾಗಿ ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಈ ತಂಡವು ದೆಹಲಿಯ ಅತ್ಯಂತ ದಟ್ಟಣೆಯ 100 ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಅಧ್ಯಯನ ನಡೆಸಿದೆ. ಈ ಕುರಿತು ಪ್ರಾಯೋಗಿಕವಾಗಿ ದೆಹಲಿಯ ಭೈಕಾಜಿ ಕಾಮಾದ ಜಂಕ್ಷನ್‌ನಲ್ಲಿ ಜನರಿಗೆ 7 ದಿನಗಳ ಕಾಲ ಅರಿವು ಮೂಡಿಸುವ ಕಾರ್ಯವನ್ನೂ ಈ ಸಂಶೋಧಕರ ತಂಡ ಮಾಡಿದೆ. ಎಲ್ಲಾ 100 ಜಂಕ್ಷನ್‌ಗಳಲ್ಲೂ ಈ ಅಭಿಯಾನ ನಡೆಸುವುದಾಗಿಯೂ ತಂಡ ಹೇಳಿದೆ.

ಕೇವಲ ಶೇ.20 ಮಂದಿಯಷ್ಟೇ ತಾವಾಗಿಯೇ ಎಂಜಿನ್ ಸ್ವಿಚ್ ಆಫ್ ಮಾಡಿದ್ದರು. ಅಭಿಯಾನ ನಡೆಸಿದ ವೇಳೆ ಈ ಪ್ರಮಾಣ ಶೇ.62ಕ್ಕೆ ಏರಿತ್ತು. ಅಭಿಯಾನದ ನಂತರ ಕೂಡಾ ಶೇ.53 ರಷ್ಟು ಮಂದಿ ಎಂಜಿನ್ ಆಫ್ ಮಾಡುತ್ತಿದ್ದಾರೆ ಎಂದು ಪಿಸಿಆರ್‌ಎನ ಕಾರ್ಯಕಾರಿ ನಿರ್ದೇಶಕ ಅಲೋಕ್ ತ್ರಿಪಾಠಿ ಹೇಳಿದ್ದಾರೆ.

ಅಭಿಯಾಯನದ ವೇಳೆ ಭೈಕಾಜಿ ಕಾಮಾ ಜಂಕ್ಷನ್‌ನಲ್ಲಿ ನೈಟ್ರೋಜನ್ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಪ್ರಮಾಣ ತಗ್ಗಿತ್ತು ಎಂದೂ ಅವರು ಹೇಳಿದ್ದಾರೆ. ಆಟೋರಿಕ್ಷಾ ಚಾಲಕರು ಉತ್ತಮವಾಗಿ ಸ್ಪಂದಿಸಿದರು. ಎಂಜಿನ್ ಸ್ವಿಚ್ ಅಫ್ ಮಾಡಿದ ಆಟೋಚಾಲಕರ ಪ್ರಮಾಣ ಶೇ.77 ರಷ್ಟಿತ್ತು ಎಂದೂ ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...