alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಕ್ಕಿ ಕೊಲೆ ಪ್ರಕರಣದ ಆರೋಪಿಯದ್ದು ಹತ್ಯೆಯೋ? ಆತ್ಮಹತ್ಯೆಯೋ ?

swathi-case-its-murder-say-kin-and-counsel-of-ramkumarಇನ್ಫೋಸಿಸ್ ಸಂಸ್ಥೆಯ ಟೆಕ್ಕಿ ಸ್ವಾತಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಆರೋಪಿ ರಾಮ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅಧಿಕಾರಿಗಳೇ ಅವನನ್ನು ಹತ್ಯೆ ಮಾಡಿದ್ದಾರೆಂದು ರಾಮ್ ಕುಮಾರ್ ಪರ ವಕೀಲ ಆರೋಪಿಸಿದ್ದಾರೆ.

ರಾಮ್ ಕುಮಾರ್ ನನ್ನು ಚೆನ್ನೈ ಹೊರವಲಯದಲ್ಲಿರುವ ಪುಳಲ್ ಜೈಲಿನಲ್ಲಿರಿಸಲಾಗಿತ್ತು. ನಿನ್ನೆ ರಾಮ್ ಕುಮಾರ್ ಜೈಲಿನಲ್ಲಿದ್ದ ವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿದ್ದಾನೆ, ಬಳಿಕ ಅದನ್ನು ಕುತ್ತಿಗೆಗೆ ಬಿಗಿದುಕೊಂಡಿದ್ದಾನೆ. ಇದನ್ನು ಗಮನಿಸಿದ ಜೈಲು ಅಧಿಕಾರಿಗಳು ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲಿಸಿದರಾದ್ರೂ, ಅಷ್ಟರಲ್ಲಿ ರಾಮ್ ಕುಮಾರ್ ಮೃತಪಟ್ಟಿದ್ದ.

ನಿನ್ನೆಯಷ್ಟೇ ರಾಮ್ ಕುಮಾರ್ ಜೊತೆ ಮಾತನಾಡಿದ್ದು, ಆತ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.  ಇದು ಅಧಿಕಾರಿಗಳೇ ಮಾಡಿದ ವ್ಯವಸ್ಥಿತ ಕೊಲೆ ಅಂತಾ ರಾಮ್ ಕುಮಾರ್ ವಕೀಲ ದೂರಿದ್ದಾರೆ. ಇವತ್ತು ರಾಮ್ ಕುಮಾರ್ ನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಹೀಗಾಗಿ ಆತನನ್ನು ನೋಡಲು ಚೆನ್ನೈಗೆ ಬಂದಿದ್ದೆವು ಅಂತಾ ಸಂಬಂಧಿ ಸೆಲ್ವಕುಮಾರ್ ಹೇಳಿದ್ದಾರೆ.

ಚೆನ್ನೈ ಪೊಲೀಸರು ಕರೆ ಮಾಡಿ ಸರ್ಕಾರಿ ರೊಯಪೇಟಾ ಆಸ್ಪತ್ರೆಗೆ ಬರುವಂತೆ ಹೇಳಿದ್ರು, ಬಳಿಕ ರಾಮ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಹೇಳಿದ್ದಾರೆ ಅನ್ನೋದು ಸೆಲ್ವಕುಮಾರ್ ಆರೋಪ. ರಾಮ್ ಕುಮಾರ್ ತಂದೆ ಪರಮಶಿವಂ ಕೂಡ ಮಗನನ್ನು ಪೊಲೀಸರೇ ಕೊಂದಿದ್ದಾರೆಂದು ದೂರಿದ್ದಾರೆ. ತನ್ನ ಪ್ರೀತಿ ನಿರಾಕರಿಸಿದಳು ಅನ್ನೋ ಕಾರಣಕ್ಕೆ ರಾಮ್ ಕುಮಾರ್ ಚೆನ್ನೈನ ನುಂಗಂಬಾಕ್ಕಮ್ ರೈಲ್ವೆ ನಿಲ್ದಾಣದಲ್ಲಿ ಸ್ವಾತಿಯನ್ನು ಭೀಕರವಾಗಿ ಕೊಚ್ಚಿ ಕೊಂದಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...