alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಚ್ಛ ಭಾರತ ರ್ಯಾಂಕಿಂಗ್ ನಲ್ಲಿ ಇಂದೋರ್ ಫಸ್ಟ್

ಮೋದಿ ಸರ್ಕಾರ  ಸ್ವಚ್ಛ ಭಾರತ 2018 ರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೆಟ್ರೋಪಾಲಿಟಿನ್ ನಗರಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನದಲ್ಲಿದೆ. ಸ್ವಚ್ಛ ಭಾರತ ಸರ್ವೆಯಲ್ಲಿ ಭೋಪಾಲ್ ಎರಡನೇ ಹಾಗೂ ಚಂಡೀಗಢ ಮೂರನೇ ಸ್ಥಾನದಲ್ಲಿದೆ.

ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಛತೆಯ ಸರ್ವೆ ಮಾಡಿತ್ತು. 25 ನಗರಗಳನ್ನು ಅತ್ಯಂತ ಕೊಳಕು ನಗರವೆಂದು ಸರ್ವೆಯಲ್ಲಿ ಹೇಳಲಾಗಿದೆ. ಕೊಳಕು ನಗರ ಪಟ್ಟಿಯಲ್ಲಿ 19 ಪಶ್ಚಿಮ ಬಂಗಾಳದಲ್ಲಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮವೊಂದರಲ್ಲಿ ಇಂದೋರ್ ಗೆ ಕ್ಲೀನ್ ಸಿಟಿ-2018ರ ಪ್ರಶಸ್ತಿ ನೀಡಿದ್ದಾರೆ. ಜೊತೆಗೆ ಸ್ವಚ್ಛತೆ ಬಗ್ಗೆ ಇಲಾಖೆ ಕೆಲಸವನ್ನು ಪ್ರಶಂಸಿಸಿದ್ದಾರೆ.

ಸ್ವಚ್ಛತೆ ಸಮೀಕ್ಷೆಗೆ 6 ವಿಧಾನಗಳನ್ನು ಮಾನದಂಡವಾಗಿ ಬಳಸಲಾಗಿತ್ತು. ಶುಷ್ಕ ಮತ್ತು ತೇವವಾದ ಕಸ, ಸಂಸ್ಕರಣೆ,  ನೈರ್ಮಲ್ಯವನ್ನು ಒಳಗೊಂಡಿತ್ತು. ಪಶ್ಚಿಮ ಬಂಗಾಳ 2016 ಮತ್ತು 2017ರಲ್ಲಿ ಶುಚಿತ್ವ ಸಮೀಕ್ಷೆಯಲ್ಲಿ ಪಾಲ್ಗೊಂಡಿರಲಿಲ್ಲ. ಈ ಬಾರಿ ರಾಜ್ಯದ 19 ಜಿಲ್ಲೆಗಳನ್ನು ಸರ್ವೆಗೆ ಪರಿಗಣಿಸಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...