alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟೇಲ್ ಗೆ ಬಂದ ಜೋಡಿಗೇನಾಯ್ತು ಗೊತ್ತಾ..?

56707723

ಪತಿ-ಪತ್ನಿ ಎಂದು ಹೇಳಿಕೊಂಡು ಇಬ್ಬರು ಹರಿದ್ವಾರದ ಕೊತ್ವಾಲಿಯ ಬಗ್ಗಾ ಹೊಟೇಲ್ ನಲ್ಲಿ ರೂಂ ಪಡೆದಿದ್ದಾರೆ. ಮೂರನೇ ಮಹಡಿಯಲ್ಲಿದ್ದ ಜೋಡಿ ರೂಂಗೆ ತಡರಾತ್ರಿ ಪೊಲೀಸ್ ಬಂದಿದ್ದಾರೆ. ಪತಿ ಎಂದುಕೊಂಡು ಬಂದವ ಹೆಣವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ನಿತೀಶ್ ಶರ್ಮಾ ಹಾಗೂ ಮನಿಷಾ ವಾಸ್ತವವಾಗಿ ಗಂಡ-ಹೆಂಡತಿಯಲ್ಲ. ನಿತೀಶ್ ಮನೆಯ ಪಕ್ಕದಲ್ಲಿ ಮನಿಷಾ ಬಾಡಿಗೆಗಿದ್ದಳು. ಮೂರು ವರ್ಷಗಳಿಂದ ಇವರು ಪ್ರೀತಿಸ್ತಿದ್ದರು. ಮನಿಷಾಗೆ ಈಗ 8 ತಿಂಗಳು. ಮನಿಷಾಳನ್ನು ಮದುವೆಯಾಗಲು ನಿತೀಶ್ ನಿರಾಕರಿಸಿದ್ದ. ಪ್ರಕರಣ ಪೊಲೀಸ್ ಠಾಣೆ ಏರಿತ್ತು.

ಇಬ್ಬರ ನಡುವೆ ಸಂಧಾನ ಮಾಡಿದ್ದ ಪೊಲೀಸ್ ಅಧಿಕಾರಿಗಳು ನಿತೀಶ್ ನನ್ನು ಮದುವೆಗೆ ಒಪ್ಪಿಸಿದ್ದಾರೆ. ಇಬ್ಬರೂ ಹೊಟೇಲ್ ಗೆ ಬಂದು ರೂಂ ಮಾಡಿದ್ದಾರೆ. ಮಧ್ಯರಾತ್ರಿ ನಿತೀಶ್ ಸಾವನ್ನಪ್ಪಿದ್ದಾನೆ. ವಿಷ್ಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಶುರುಮಾಡಿದ್ದಾರೆ.

ನಿತೀಶ್ ರಾತ್ರಿ ಮದ್ಯಪಾನ ಮಾಡಿದ್ದ. ಈ ವೇಳೆ ಗ್ಲಾಸ್ ಗೆ ಕೈ ಹೊಡೆದುಕೊಂಡಿದ್ದಾನೆ. ನರ ಕಟ್ ಆಗಿ ಸಾವನ್ನಪ್ಪಿದ್ದಾನೆ. ಆತನ ಮನೆಯವರು ನನ್ನನ್ನು ಸೊಸೆಯಾಗಿ ಸ್ವೀಕರಿಸಿರಲಿಲ್ಲ. ಹಾಗಾಗಿ ನಾವು ರೂಂ ಮಾಡಿದ್ದೆವು ಎಂದು ಮನಿಷಾ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...