alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ವರ್ಗಾವಣೆ ಕೇಳಿದ್ದಕ್ಕೆ ಜೈಲು ಪಾಲಾದ ಶಿಕ್ಷಕಿ

ಉತ್ತರಾಖಂಡ್ ನ ಶಾಲಾ ಶಿಕ್ಷಕಿಯೊಬ್ಬರು ವರ್ಗಾವಣೆ ಕೇಳಿದ ತಪ್ಪಿಗೆ ಕೆಲಸವನ್ನೂ ಕಳೆದುಕೊಂಡು ಜೈಲು ಶಿಕ್ಷೆಗೆ ಗುರಿಯಾದ ಘಟನೆ ನಡೆದಿದೆ.

ಶಾಲಾ ಶಿಕ್ಷಕರಿಗೆ ಜೈಲು ಶಿಕ್ಷೆಯನ್ನ ಕರುಣಿಸಿದ್ದು ಮತ್ತಾರು ಅಲ್ಲ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ರಾವತ್. ಸಿಎಂ ಸಿಟ್ಟಿಗೆ ಗುರಿಯಾಗಿ ಜೈಲು ಶಿಕ್ಷೆ ಅನುಭವಿಸ್ತಿರೋದು 57ವರ್ಷದ ಹಿರಿಯ ಶಾಲಾ ಶಿಕ್ಷಕಿ ಉತ್ತರ ಬಹುಗುಣ. ಸಭೆಯಲ್ಲಿ ಅನುಚಿತ ಪದ ಬಳಕೆ ಮತ್ತು ಅಸಭ್ಯತೆಯಿಂದ ನಡೆದುಕೊಂಡ ಆರೋಪದ ಮೇಲೆ ಶಿಕ್ಷಕರನ್ನ ಕೆಲಸದಿಂದ ವಜಾಗೊಳಿಸಿ ಬಂಧಿಸಿ ಅಂತ ಆದೇಶ ನೀಡಿದ್ದಾರೆ ತ್ರಿವೇಂದ್ರ ರಾವತ್.

ಉತ್ತರ ಬಹುಗುಣ ಅವರು ಉತ್ತರ ಕಾಶಿಯಲ್ಲಿನ ಗ್ರಾಮದಲ್ಲಿ 25 ವರ್ಷಗಳಿಂದ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸ್ತಿದ್ದಾರೆ. 2015 ರಲ್ಲಿ ಅವರ ಪತಿ ನಿಧನರಾಗಿದ್ದಾರೆ. ಬಹುಗುಣ ಅವರ ಮಕ್ಕಳು ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ ನಲ್ಲಿ ನೆಲೆಸಿದ್ದಾರೆ. ಹಾಗಾಗಿ ಉತ್ತರ ಬಹುಗುಣ ಅವರು ಡೆಹ್ರಾಡೂನ್ ಗೆ ವರ್ಗಾವಣೆ ಬಯಸಿದ್ದರು.

ಈ ಸಂಬಂಧ ಮನವಿ ಪತ್ರವೊಂದನ್ನ ಹಿಡಿದು ಮುಖ್ಯಮಂತ್ರಿಯವರ ಜನತಾ ದರ್ಬಾರ್ ಸಭೆಗೆ ಬಂದು ಮುಖ್ಯಮಂತ್ರಿಗಳು ನನ್ನ ಮನವಿ ಸ್ವೀಕರಿಸಬಹುದು ಅನ್ನೋ ನಿರೀಕ್ಷೆಯಲ್ಲಿದ್ದರು. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಶಿಕ್ಷಕರ ಮನವಿಯನ್ನ ಕೇಳ್ತಿದ್ದ ಹಾಗೆ ಸಿಎಂ ಸಭೆಯಲ್ಲಿ ರಾಂಗ್ ಆದರು. ಶಿಕ್ಷಕರನ್ನು ಈ ಕೂಡಲೇ ಬಂಧಿಸಿ ಜೈಲಿಗಟ್ಟಿ ಅಂತ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದ್ರು. ಹಾಗಾಗಿ ಸಿಎಂ ಆದೇಶವನ್ನ ಪೊಲೀಸರು ಚಾಚೂತಪ್ಪದೆ ಪಾಲಿಸಿದ್ದಾರೆ.

ಘಟನೆಯ ಸಂಬಂಧ ಪ್ರತಿಕ್ರಿಯಿಸಿರುವ ಉತ್ತರಾಖಂಡ್ ಮಾಜಿ ಸಿಎಂ ಹರೀಶ್ ರಾವತ್, ಸರ್ಕಾರ ಸೂಕ್ಷ್ಮ ಸಂವೇದನೆಯನ್ನೇ ಕಳೆದುಕೊಂಡಿದೆ. ಈ ಕೂಡಲೇ ಉತ್ತರ ಬಹುಗುಣ ಅವರನ್ನ ಬಂಧಮುಕ್ತಗೊಳಿಸಿ ವಜಾ ಆದೇಶವನ್ನ ಹಿಂಪಡೆಯುವಂತೆ ಸರ್ಕಾರವನ್ನ ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...