alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವನ ಕೊಚ್ಚಿ ಕೊಂದ ಪತಿ

ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ವ್ಯಕ್ತಿಯನ್ನು ಕೊಚ್ಚಿ ಹಾಕಿದ್ದ ಆರೋಪದಲ್ಲಿ ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ.

ಘಟನೆ ಪಶ್ಚಿಮ‌ ಬಂಗಾಳದ ಪರ್ಗಾನಾಸ್ ಜಿಲ್ಲೆಯಲ್ಲಿ ನಡೆದಿದೆ. ಜೋರ್ಜಾ ಪ್ರದೇಶದ 45 ವರ್ಷದ ಜಾಕೀರ್ ಹುಸೇನ್ ಬಂಧಿತ ಆರೋಪಿ. ಜಾಕೀರ್ ನ ಪತ್ನಿ‌ ಮರಿಜಾನಾ ಬೀಬಿ‌ಯೊಂದಿಗೆ ಅನೈತಿಕ‌ ಸಂಬಂಧ ಹೊಂದಿದ್ದ ಎಂದು 26 ವರ್ಷ ಅಬ್ದುಲ್‌ ಹಸನ್ ಎನ್ನುವ ‌ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಜಾಕೀರ್ ಹಾಗೂ ಆತನ ಪತ್ನಿಯನ್ನು ಪೊಲೀಸರು‌ ವಶಕ್ಕೆ ಪಡೆದಿದ್ದಾರೆ.

ಅಬ್ದುಲ್ ಹಸನ್ ನೊಂದಿ‌ಗೆ ತನ್ನ ಪತ್ನಿ ‌ಅನೈತಿಕ ಸಂಬಂಧ ಹೊಂದಿದ್ದಾಳೆ ಎನ್ನುವ ಅನುಮಾನ ಹೊಂದಿದ್ದ ಜಾಕೀರ್ ಕೈಗೆ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದರು. ಇದರಿಂದ ಕೋಪಗೊಂಡ ಜಾಕೀರ್, ಅಬ್ದುಲ್‌ ನನ್ನು ಕೊಲೆ ಮಾಡಿದ್ದು, ಪ್ರಕರಣ ಮುಚ್ಚಿ ಹಾಕಲು ಆತನ‌ ದೇಹವನ್ನು ತುಂಡು ಮಾಡಿ ಬೇರೆ ಬೇರೆ ಸ್ಥಳಗಳಲ್ಲಿ‌ ಬಿಸಾಕಿದ್ದ‌ ಎಂದು ಪೊಲೀಸರು ಹೇಳಿದ್ದಾರೆ.

ನ.5ರಂದು ಕಾಣೆಯಾಗಿದ್ದ ಅಬ್ದುಲ್ ನ ಪತ್ತೆಗೆ ಪೊಲೀಸರು‌ ಮುಂದಾದಾಗ ಪ್ರಕರಣ ಬೆಳಕಿಗೆ ಬಂದಿದ್ದೆ. ದಂಪತಿಯನ್ನು‌ ಬಂಧಿಸಿ ವಿಚಾರಣೆ ನಡೆಸಿದಾಗ ಅಬ್ದುಲ್ ದೇಹ ಹಾಗೂ ತಲೆಯನ್ನು ಬೇರೆ ಭಾಗಗಳಲ್ಲಿ ಬಿಸಾಕಿರುವುದಾಗಿ ತಿಳಿದುಬಂದಿದ್ದು, ಸ್ಥಳ ಪರಿಶೀಲನೆ ನಡೆಸಿದಾಗ ಮೃತದೇಹ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...