alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಬಾಲಕನಿಗೆ ಭಾರತದಲ್ಲಿ ಚಿಕಿತ್ಸೆ: ಪಾಲಕರಿಗೆ ನೆರವಾದ ಸುಷ್ಮಾ

sushma_g_1497243079_749x421

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತೆ ಮಾನವೀಯತೆ ಮೆರೆದಿದ್ದಾರೆ. ಪಾಕಿಸ್ತಾನದ ತಂದೆ-ತಾಯಿಗೆ ನೆರವಾಗಿದ್ದಾರೆ. ಮಗನ ಚಿಕಿತ್ಸೆಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬರಲು ಪಾಲಕರಿಗೆ ವೈದ್ಯಕೀಯ ವೀಸಾ ನೀಡಿದ್ದಾರೆ.

ಪಾಕಿಸ್ತಾನದ ರೆಹಾನ್ ವಯಸ್ಸು ಕೇವಲ 4 ತಿಂಗಳು. ಈತನ ಹೃದಯದಲ್ಲಿ ರಂಧ್ರವಿದೆ. ರೆಹಾನ್ ಪಾಲಕರು ಭಾರತಕ್ಕೆ ಬಂದು ಜೆ.ಪಿ. ಆಸ್ಪತ್ರೆಯಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸಲು ಬಯಸಿದ್ದರು. ಆದ್ರೆ ವೈದ್ಯಕೀಯ ವೀಸಾ ಸಿಕ್ಕಿರಲಿಲ್ಲ. ಟ್ವೀಟರ್ ಮೂಲಕ ಸುಷ್ಮಾ ಬಳಿ ನೋವು ಹಂಚಿಕೊಂಡಿದ್ದ ಪಾಲಕರು ವೈದ್ಯಕೀಯ ವೀಸಾ ನೀಡಲು ನೆರವಾಗುವಂತೆ ಕೋರಿದ್ದರು.

ರೆಹಾನ್ ಪಾಲಕರ ಟ್ವೀಟರ್ ಗೆ ಸ್ಪಂದಿಸಿದ್ದ ಸುಷ್ಮಾ, ಹೆದರಬೇಡಿ ರೆಹಾನ್ ಗೆ ಏನೂ ಆಗೋದಿಲ್ಲ ಎಂದಿದ್ದರು. ಭಾರತ-ಪಾಕ್ ಗಲಾಟೆ ಏನೇ ಇದ್ರೂ ಅದು ರೆಹಾನ್ ಚಿಕಿತ್ಸೆಗೆ ಅಡ್ಡಿಯಾಗುವುದಿಲ್ಲ ಎಂಬ ಭರವಸೆ ನೀಡಿದ್ದು. ಇದಾದ ಕೆಲವೇ ಕ್ಷಣಗಳಲ್ಲಿ ರೆಹಾನ್ ತಂದೆ-ತಾಯಿಗೆ ವೈದ್ಯಕೀಯ ವೀಸಾ ಜಾರಿಯಾಗಿದೆ. ಭಾರತಕ್ಕೆ ಬಂದ ನಂತ್ರ ರೆಹಾನ್ ಗೆ ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...