alex Certify
ಕನ್ನಡ ದುನಿಯಾ       Mobile App
       

Kannada Duniya

ಸುಷ್ಮಾ ಸ್ವರಾಜ್ ಗೆ ಕಿಡ್ನಿ ನೀಡಲು ಆಸಕ್ತರಾಗಿದ್ದಾರೆ ಅಭಿಮಾನಿಗಳು

sushma

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸದ್ಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಷ್ಮಾರ ಒಂದು ಕಿಡ್ನಿ ಫೇಲ್ ಆಗಿದೆ ಎನ್ನುವ ವಿಷಯ ಹೊರಗೆ ಬರ್ತಾ ಇದ್ದಂತೆ ವಿದೇಶಾಂಗ ಸಚಿವೆಗೆ ಕಿಡ್ನಿ ನೀಡಲು ಮುಂದೆ ಬರ್ತಾ ಇರುವವರ ಸಂಖ್ಯೆ ದೊಡ್ಡದಾಗ್ತಿದೆ.

ಬಲೂಚಿಸ್ಥಾನದ ಜರ್ನಲಿಸ್ಟ್ ನಂತ್ರ ಮಧ್ಯಪ್ರದೇಶದ ಟ್ರಾಫಿಕ್ ಪೊಲೀಸ್ ಒಬ್ಬರು ಆಸಕ್ತಿ ತೋರಿದ್ದಾರೆ. ಭೋಪಾಲ್ ನ ಟ್ರಾಫಿಕ್ ಪೊಲೀಸ್ ಗೌರವ್, ಸುಷ್ಮಾರಿಗೆ ಕಿಡ್ನಿ ನೀಡುವುದಾಗಿ ಹೇಳಿದ್ದಾರೆ. ಸುಷ್ಮಾ ಉತ್ತಮ ನಾಯಕಿ. ನಮಗೆ ಅವರ ಅವಶ್ಯಕತೆ ಇದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುಣಮುಖರಾಗುವ ಅವಶ್ಯಕತೆ ನಮಗೆಲ್ಲರಿಗೂ ಇದೆ. ಹಾಗಾಗಿ ನಾನು ಕಿಡ್ನಿ ನೀಡಲು ಸಿದ್ಧ ಎಂದಿದ್ದಾರೆ ಗೌರವ್.

ಈ ನಡುವೆ ಟ್ವೀಟರ್ ಮೂಲಕ  ಕಿಡ್ನಿ ದಾನ ಮಾಡಲು ಬಂದ ಅಭಿಮಾನಿಗಳಿಗೆ ಸುಷ್ಮಾ ಸ್ವರಾಜ್ ಧನ್ಯವಾದ ಹೇಳಿದ್ದಾರೆ. ನನಗೆ ಕಿಡ್ನಿ ನೀಡುವುದಾಗಿ ಹೇಳಿದ ಸ್ನೇಹಿತರಿಗೆ ಧನ್ಯವಾದ ಹೇಳಲು ನನ್ನ ಬಳಿ ಶಬ್ಧವಿಲ್ಲ. ಕೃಷ್ಣನ ಕೃಪೆ ಹಾಗೂ ಜನರ ಆಶೀರ್ವಾದದಿಂದಾಗಿ ನಾನು ಆದಷ್ಟು ಬೇಗ ಗುಣಮುಖಳಾಗಿ ಬರ್ತೇನೆಂದು ಸುಷ್ಮಾ ಟ್ವಿಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...