alex Certify
ಕನ್ನಡ ದುನಿಯಾ       Mobile App
       

Kannada Duniya

‘ದೇಶದ ಸೊಸೆಗೆ ವೀಸಾ ಸಿಗ್ತಿಲ್ಲ ಏಕೆ? ವಿಚಾರಿಸುವೆ’

sushma

ಹೈದರಾಬಾದ್: ನಮ್ಮ ದೇಶದ ಸೊಸೆಗೆ ವೀಸಾ ಏಕೆ ಸಿಗುತ್ತಿಲ್ಲ. ನಾನು ರಾಯಭಾರ ಕಚೇರಿಯೊಂದಿಗೆ ಮಾತನಾಡುತ್ತೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿರುವ ತನ್ನ ಪತ್ನಿಯನ್ನು ಭಾರತಕ್ಕೆ ಕರೆ ತರಲು ವೀಸಾ ಸಿಗದ ಕಾರಣ, ಹೈದರಾಬಾದ್ ನ ವ್ಯಕ್ತಿ ಸುಷ್ಮಾ ಸ್ವರಾಜ್ ಅವರಿಗೆ ಸಹಾಯ ಕೋರಿದ್ದಾರೆ.

ಪತ್ನಿಗೆ ವೀಸಾ ಕೊಡಿಸಲು ನೆರವಾಗಿ ಎಂದು ವ್ಯಕ್ತಿ ಟ್ವಿಟರ್ ನಲ್ಲಿ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಸುಷ್ಮಾ ಸ್ವರಾಜ್, ಸೌತ್ ಆಫ್ರಿಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

ಹೈದರಾಬಾದ್ ನ ಸಂತೋಷ್ ಆಚಾರ್ಯ 2016 ರ ಮಾರ್ಚ್ ನಲ್ಲಿ ಸೌತ್ ಆಫ್ರಿಕಾದ ಮೋನಿಕಾರನ್ನು ಮದುವೆಯಾಗಿದ್ದು, ಜೂನ್ ನಲ್ಲಿ ವೀಸಾ ಪಡೆಯಲು ಅರ್ಜಿ ಸಲ್ಲಿಸಿದ್ದರು.

6 ತಿಂಗಳಾದರೂ ವೀಸಾ ಸಿಕ್ಕಿರಲಿಲ್ಲ. ತಮ್ಮ ವೀಸಾ ಅವಧಿ ಮುಗಿದಿದ್ದರಿಂದ ಸಂತೋಷ್ ಸ್ವದೇಶಕ್ಕೆ ಮರಳಿದ್ದರು. ನವೆಂಬರ್ ನಲ್ಲಿ ಭಾರತಕ್ಕೆ ಬಂದ ಅವರು, ಪತ್ನಿಯನ್ನು ಕರೆಸಿಕೊಳ್ಳಲು ಪ್ರಯತ್ನ ನಡೆಸಿದ್ದರು. ಈಗ ಪತ್ನಿಗೆ ವೀಸಾ ಕೊಡಿಸಬೇಕೆಂದು ಮನವಿ ಮಾಡಿದ್ದು, ಸುಷ್ಮಾ ಸ್ವರಾಜ್ ಸ್ಪಂದಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...