alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಸ್ಪೋರ್ಟ್ ಕಳೆದುಕೊಂಡು ಕಂಗಾಲಾಗಿದ್ದ ವರನ ನೆರವಿಗೆ ವಿದೇಶಾಂಗ ಸಚಿವೆ

ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಕಷ್ಟದಲ್ಲಿರುವ ಭಾರತೀಯರ ಪಾಲಿಗೆ ಆಪತ್ಬಾಂಧವರಾಗುತ್ತಿರುವ ಮತ್ತೊಂದು ಸನ್ನಿವೇಶ ನಡೆದಿದೆ. ಮದುವೆ ಕೆಲವೇ ದಿನಗಳಿರುವಾಗ ಪಾಸ್ಪೋರ್ಟ್ ಕಳೆದುಕೊಂಡಿರುವ ವರನೊಬ್ಬನ ನೆರವಿಗೆ ನಿಂತಿದ್ದಾರೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್.

ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲಾ ದೂರುಗಳ ಮೇಲೆ ನಿಗಾ ಇಟ್ಟಿರುವ ಸುಷ್ಮಾ ಸ್ವರಾಜ್, ವೀಸಾ ಮತ್ತು ಪಾಸ್ಪೊರ್ಟ್ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವುದರಿಂದ ಜನಮನ ಗೆದ್ದಿದ್ದಾರೆ. ಆ ಕ್ಷಣದ ಮಟ್ಟಿಗೆ ತಮ್ಮಿಂದಾಗುವ ಸಹಾಯ ಮಾಡುತ್ತಾ ಬಂದಿರುವ ಸುಷ್ಮಾ ಸ್ವರಾಜ್ ಅವರ ಟ್ವಿಟ್ಟರ್ ಅಕೌಂಟ್ಗೆ ಭಾರತೀಯ ಯುವಕನೊಬ್ಬ ತನ್ನ ಕಷ್ಟವನ್ನು ವಿವರಿಸಿ ಟ್ವೀಟ್ ಮಾಡಿದ್ದ.

ದೇವತಾ ರವಿ ತೇಜಾ ಎನ್ನುವ ವ್ಯಕ್ತಿ, ವಾಷಿಂಗ್ಟನ್ ವಿಮಾನ ನಿಲ್ದಾಣದಲ್ಲಿ ಪಾಸ್ಪೋರ್ಟ್ ಕಳೆದುಕೊಂಡಿದ್ದೇನೆ. ಆಗಸ್ಟ್ 13-15 ರವರೆಗೆ ನನ್ನ ಮದುವೆ ಇದೆ. ಆಗಸ್ಟ್ 10ರಂದು ನಾನು ಮದುವೆಗೆ ಅಗಮಿಸಬೇಕಿದೆ. ಈ ಕ್ಷಣದಲ್ಲಿ ನನಗಿರುವ ಒಂದೇ ಒಂದು ಭರವಸೆ ಅಂದ್ರೆ ನೀವೇನೆ. ನಿಮ್ಮಿಂದ ಮಾತ್ರ ನನಗೆ ತತ್ಕಾಲ್ ಪಾಸ್ಪೋರ್ಟ್ ಕೊಡಿಸೋದಕ್ಕೆ ಸಾಧ್ಯ ಎಂದು ಟ್ವೀಟ್ ಮಾಡಿದ್ದಾನೆ.

ಯುವಕನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಸುಷ್ಮಾ ಸ್ವರಾಜ್, ಪಾಸ್ಪೋರ್ಟ್ ಕಳೆದುಕೊಂಡಿರುವ ಸಮಯ ಕೆಟ್ಟದಿದೆ. ನಿಮ್ಮ ಮದುವೆಗೆ ವಿಘ್ನವಾಗದಂತೆ ನೋಡಿಕೊಳ್ಳುವ ಪ್ರಯತ್ನ ನಾವು ಮಾಡ್ತಿವಿ ಅಂತ ಹೇಳಿದ್ದಾರೆ. ಇಷ್ಟೇ ಅಲ್ಲ ಅಮೆರಿಕದಲ್ಲಿನ ಭಾರತೀಯ ದೂತವಾಸ ಕಚೇರಿಯ ಸಹಾಯವಾಣಿಗೂ ದೇವತಾ ರವಿ ತೇಜಾ ಅವರ ಟ್ವೀಟನ್ನು ಟ್ಯಾಗ್ ಮಾಡಿದ್ದಾರೆ.

ಟ್ವೀಟಿಗರು ಸುಷ್ಮಾ ಸ್ವರಾಜ್ ಅವರ ಈ ಸ್ಪಂದನೆಗೆ ಟ್ವಿಟ್ಟರ್ ನಲ್ಲಿ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಅನೇಕರು ಸುಷ್ಮಾ ಅವರ ಕಾರ್ಯ ವೈಖರಿಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...