alex Certify
ಕನ್ನಡ ದುನಿಯಾ       Mobile App
       

Kannada Duniya

ತಲೆಗೆ ಗಾಯವಾಗಿದ್ದ ರೋಗಿಗೆ ಕಾಲಿನ ಆಪರೇಷನ್ ಮಾಡಿದ ವೈದ್ಯ

ತಲೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಗೆ ದೆಹಲಿಯ ವೈದ್ಯರೊಬ್ಬರು ಕಾಲಿನ ಆಪರೇಶನ್ ಮಾಡಿದ್ದಾರೆ. ದೆಹಲಿ ಸರ್ಕಾರದ ಸುಶ್ರುತ ಟ್ರೊಮಾ ಸೆಂಟರ್ ನಲ್ಲಿ ಈ ಯಡವಟ್ಟು ನಡೆದಿದೆ.

ಅಪಘಾತವೊಂದರಲ್ಲಿ ವಿಜೇಂದ್ರ ತ್ಯಾಗಿ ಎಂಬಾತನ ತಲೆಗೆ ಸಣ್ಣಪುಟ್ಟ ಗಾಯವಾಗಿತ್ತು. ವಿಜೇಂದ್ರ ಇದ್ದ ವಾರ್ಡ್ ನಲ್ಲೇ ಕಾಲು ಫ್ರಾಕ್ಚರ್ ಆಗಿದ್ದ ಇನ್ನೋರ್ವ ರೋಗಿ ಇದ್ದ. ಅವನೇ ಇವನು ಎಂದುಕೊಂಡ ವೈದ್ಯರು, ವಿಜೇಂದ್ರ ಕಾಲಿಗೆ ಆಪರೇಷನ್ ಮಾಡಿದ್ದಾರೆ. ವಿಜೇಂದ್ರನ ಬಲಗಾಲಿಗೆ ಸಣ್ಣ ರಂಧ್ರ ಕೊರೆದ ವೈದ್ಯರು ಪಿನ್ ಅಳವಡಿಸಿದ್ದಾರೆ.

ಅನಸ್ತೇಶಿಯಾ ಕೊಟ್ಟಿದ್ದರಿಂದ ವೈದ್ಯರು ಮಾಡಿದ ಪ್ರಮಾದ ವಿಜೇಂದ್ರನ ಗಮನಕ್ಕೆ ಬರಲಿಲ್ಲ. ನಂತರ ಆತನಿಗೆ ಎಚ್ಚರ ಬರುವಷ್ಟರಲ್ಲಿ ವೈದ್ಯರು ಕಾಲಿಗೆ ಹಾಕಿದ್ದ ಪಿನ್ ತೆಗೆದು ಹೊಲಿದುಬಿಟ್ಟಿದ್ದರು. ಈಗ ವಿಜೇಂದ್ರ ನಡೆಯಲು ಸಹ ಕಷ್ಟಪಡುವಂತಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...