alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ದೆವ್ವ ಬಿಡಿಸಲು ಮನೆ ಯಜಮಾನನ ಎದೆ ಮೇಲೆ ಜಿಗಿದರು…!

ಮೌಢ್ಯದ ಪರಮಾವಧಿಯ ಆಘಾತಕಾರಿ ಘಟನೆಯೊಂದು ಗುಜರಾತ್‌ ನ ಸೂರತ್‌ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬನ ದೇಹದೊಳಗೆ ದೆವ್ವ ಸೇರಿಕೊಂಡಿದೆ, ಅದನ್ನು ಓಡಿಸಬೇಕಾಗಿದೆ ಎಂದು ಮನೆಯವರೆಲ್ಲ ಸೇರಿಕೊಂಡು ಆತನ ಎದೆ ಮೇಲೆ ಜಿಗಿದರು. ಪರಿಣಾಮ ಆತ ಪ್ರಾಣವನ್ನೇ ಬಿಟ್ಟಿದ್ದಾನೆ.

ಮೃತ ವ್ಯಕ್ತಿಯನ್ನು 50 ವರ್ಷದ ಕಂಜಿ ಕುಂಭರ್ ಎಂದು ಗುರುತಿಸಲಾಗಿದೆ. ಮೂಢ ನಂಬಿಕೆಗೊಳಗಾಗಿ ಆತನನ್ನು ಕೊಂದವರು ಬೇರಾರೂ ಅಲ್ಲ, ಸ್ವತಃ ಪತ್ನಿ ಹಾಗೂ ನಾಲ್ವರು ಮಕ್ಕಳು ಮತ್ತು ಸೊಸೆ.

ವಜ್ರದ ಪಾಲಿಶ್ ಕೆಲಸ ಮಾಡುತ್ತಿದ್ದ ಕಂಜಿ ಸ್ವತಃ ಮಾಟ-ಮಂತ್ರ ಮಾಡುತ್ತಿದ್ದ. ಆತನ ದೇಹದೊಳಗೇ ದೆವ್ವ ಸೇರಿಕೊಂಡಿದೆ ಎಂಬ ಸಂಶಯದಲ್ಲಿ ಕುಂಕುಮ ಮಿಶ್ರಿತ ನೀರು ಕುಡಿಸಿ ಬಳಿಕ ಮನೆಯವರು ಆತನ ಎದೆ ಮೇಲೆ ಜಿಗಿದಿದ್ದರು.

ಬಳಿಕ ಆ ದೇಹವನ್ನು ಮನೆಯಲ್ಲೇ ಬಿಟ್ಟು ಆರೂ ಮಂದಿ ನಗರವನ್ನು ತೊರೆದಿದ್ದರು. ಎರಡು ದಿನಗಳ ಬಳಿಕ ಪತ್ನಿ ವಾಪಸ್ ಬಂದವಳೇ ಪೊಲೀಸರಿಗೆ ತನ್ನ ಗಂಡ ಮೃತಪಟ್ಟಿದ್ದಾನೆ ಎಂದು ದೂರು ನೀಡಿದ್ದಳು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಎದೆಭಾಗದ ಗಾಯಗಳು ಕಂಡುಬಂದವು. ಪತ್ನಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಸದ್ಯ ಆರು ಮಂದಿಯನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...