alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದರ್ಜೆಯ ಸೌಲಭ್ಯ ಹೊಂದಲಿದೆ ಸೂರತ್ ರೈಲು ನಿಲ್ದಾಣ

ಎಲ್ಲಾ ಅಂದುಕೊಂಡಂತೆ ಆದರೆ 2020 ರ ವೇಳೆಗೆ ಸೂರತ್ ರೈಲ್ವೆ ಸ್ಟೇಷನ್ ಭಾರತದ ಅತ್ಯುತ್ತಮ ರೈಲ್ವೆ ಸ್ಟೇಷನ್ ಗಳಲ್ಲಿ ಮೂರನೇ ಸ್ಥಾನ ಪಡೆಯಲಿದೆ.

ಹೌದು….ಈಗಾಗಲೇ ಗುಜರಾತ್ ನ ಗಾಂಧಿ ನಗರದಲ್ಲಿನ ರೈಲ್ವೆ ಸ್ಟೇಷನ್ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಲು ಸಜ್ಜಾಗಿದೆ. ಸೂರತ್ ರೈಲ್ವೆ ಸ್ಟೇಷನ್ ಕೂಡ ವಿಮಾನ ನಿಲ್ದಾಣದಂತಹ ಸೌಲಭ್ಯಗಳನ್ನು ಪಡೆಯುವ ದಿನಗಳು ದೂರವಿಲ್ಲ.

ಇದಕ್ಕಾಗಿ ಸಚಿವಾಲಯದ 1 ಲಕ್ಷ ಕೋಟಿ ಸ್ಟೇಷನ್ ಪುನರ್ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಗುಜರಾತ್ ಸರ್ಕಾರ ಹಾಗೂ ಸೂರತ್ ಮುನ್ಸಿಪಲ್ ಕಾರ್ಪೋರೇಷನ್ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಯುತ್ತಿದೆ.

ಇದಕ್ಕಾಗಿ 5 ಸಾವಿರ ಕೋಟಿ ವ್ಯಯಿಸಲಾಗುತ್ತಿದ್ದು, 2020 ರ ವೇಳೆಗೆ ಪೂರ್ಣಗೊಳ್ಳಲಿದೆ.ಈ ಬೃಹತ್ ರೈಲು ನಿಲ್ದಾಣದಲ್ಲಿ ಅಂಡರ್ ಬ್ರಿಡ್ಜ್ 5 ರಸ್ತೆಗಳು, 900 ವಾಹನಗಳಿಗಾಗುವಷ್ಟು ಪಾರ್ಕಿಂಗ್ ಸೇರಿದಂತೆ ಹಲವು ವ್ಯವಸ್ಥೆಗಳಿರಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...