alex Certify
ಕನ್ನಡ ದುನಿಯಾ       Mobile App
       

Kannada Duniya

ಗಿನ್ನಿಸ್ ದಾಖಲೆಗೆ ಪಾತ್ರವಾಗಿದೆ ಈ ವಿಶಿಷ್ಟ ಉಂಗುರ

ಸೂರತ್ ನ ಆಭರಣ ತಯಾರಕರು ಮತ್ತು ಮಾರಾಟಗಾರರಾದ ವಿಶಾಲ್ ಅಗರ್ವಾಲ್ ಮತ್ತು ಖುಷ್ಬೂ ಅಗರ್ವಾಲ್ ಅಪರೂಪದ ಗಿನ್ನಿಸ್ ದಾಖಲೆಯೊಂದನ್ನ ಬರೆದಿದ್ದಾರೆ. ಉಂಗುರದಲ್ಲಿ 6690 ವಜ್ರದ ಹರಳುಗಳನ್ನ ಬಳಸಿ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.

18 ಕ್ಯಾರೆಟ್ ರೋಜ್ ಗೋಲ್ಡ್ ರಿಂಗ್ ಗೆ 48 ಎಸಳುಗಳ ಕಮಲದ ಹೂವಿನ ಆಕಾರ ಕೊಟ್ಟಿದ್ದಾರೆ. ಈ 48 ಎಸಳುಗಳನ್ನ ಅವರು ಅಲಂಕಾರ ಮಾಡಿರೋದು 6690 ವಜ್ರಗಳಿಂದ. 58 ಗ್ರಾಂ ತೂಕವಿರೋ ಈ ಉಂಗುರದ ಬೆಲೆ ಎಷ್ಟು ಗೊತ್ತಾ…? ಬರೋಬ್ಬರಿ 28 ಕೋಟಿ. ಆರು ತಿಂಗಳ ಕಾಲಾವಧಿಯಲ್ಲಿ ಈ ಉಂಗುರವನ್ನು ಸಿದ್ಧಪಡಿಸಲಾಗಿದೆ.

ಜಲಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಸಾಧನೆಯನ್ನ ಮಾಡಿದ್ದೇವೆ ಅಂತಾರೆ ವಿಶಾಲ್ ಮತ್ತು ಖುಷ್ಬೂ ಅಗರ್ವಾಲ್. ಕಮಲದ ಹೂವು ರಾಷ್ಟ್ರೀಯ ಹೂವು ಆಗಿರೋದ್ರಿಂದ ಹಾಗು ನೀರಿನಲ್ಲಿ ಅದರ ಅಂದ ಹೆಚ್ಚಾಗೋದ್ರಿಂದ ಉಂಗುರವನ್ನ ಕಮಲದ ಮಾದರಿಯಲ್ಲಿ ಸಿದ್ಧಪಡಿಸಿದರಂತೆ. ಈ 28 ಕೋಟಿ ಉಂಗುರದ ಅತ್ಯಾಕರ್ಷಕ ವಿಡಿಯೋ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಫೇಸ್ಬುಕ್ ಪೇಜ್ ನಲ್ಲಿ ಸಂಚಲನ ಸೃಷ್ಟಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...