alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಎದೆ ಝಲ್ಲೆನಿಸುವ ದುರಂತ

girl

ಸೂರತ್ ನ ಮೋಟಾ ವರ್ಚಾ ಎಂಬಲ್ಲಿ 15 ವರ್ಷದ ಬಾಲಕಿಯೊಬ್ಳು ಅಪಾರ್ಟ್ಮೆಂಟ್ ನ 5ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಪ್ಯಾಕೆಟ್ ಒಂದನ್ನು ಅಪ್ಪನಿಗೆ ಕೊಡಲು ಯತ್ನಿಸ್ತಾ ಇದ್ದಾಗ ಪರಿ ಗಜೇರಾ ಎಂಬ ಬಾಲಕಿ ಆಯತಪ್ಪಿ ಮೇಲಿಂದ ಕೆಳಕ್ಕೆ ಬಿದ್ದಿದ್ದಾಳೆ.

ಬಾಲಕಿಯ ತಂದೆ ಕೆಳಗೆ ನಿಂತಿದ್ರು, ಮೇಲಿಂದ ಬಿದ್ದ ಮಗಳನ್ನು ಹಿಡಿಯಲು ಯತ್ನಿಸಿದ್ದಾರೆ. ಆದ್ರೆ ಸಾಧ್ಯವಾಗಿಲ್ಲ, ಪರಿ ಕೆಳಕ್ಕೆ ಬಿದ್ದು ಅಪ್ಪಚ್ಚಿಯಾಗಿದ್ದಾಳೆ. ಕೂಡಲೇ ಅವಳನ್ನು ಆಸ್ಪತ್ರೆಗೆ ಸಾಗಿಸಲಾಯ್ತು, ಆದ್ರೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ.

ಈ ದಾರುಣ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೃತ ಬಾಲಕಿ ಪರಿ 10ನೇ ತರಗತಿಯಲ್ಲಿ ಓದುತ್ತಿದ್ಲು. ತಂದೆಯ ಕಣ್ಣೆದುರೇ ಈ ಘಟನೆ ನಡೆದಿದ್ದು, ಮಗಳ ಸಾವು ಹೆತ್ತವರಿಗೆ ತೀವ್ರ ಆಘಾತ ಉಂಟುಮಾಡಿದೆ.

ತಂದೆ ಪಂಕಜ್ ಹೊರಗೆ ಹೊರಟಿದ್ರು, ಕಾರಿನ ಬಳಿ ಬರ್ತಿದ್ದಂತೆ ಯಾವುದೋ ವಸ್ತುವನ್ನು ಮರೆತು ಬಂದಿದ್ದು ನೆನಪಾಗಿದೆ. ಅದನ್ನು ತಂದುಕೊಡುವಂತೆ ಮಗಳನ್ನು ಕೇಳಿದ್ದಾರೆ. 5 ಮಹಡಿಯ ಕಿಟಕಿ ಬಳಿ ನಿಂತು ಅದನ್ನು ಎಸೆಯಲು ಪರಿ ಯತ್ನಿಸ್ತಾ ಇದ್ಲು. ಈ ವೇಳೆ ಕಿಟಕಿ ಮುರಿದು ಕೆಳಕ್ಕೆ ಬಿದ್ದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...