alex Certify
ಕನ್ನಡ ದುನಿಯಾ       Mobile App
       

Kannada Duniya

ಕೋರ್ಟ್ ಕಲಾಪದ ನೇರ ಪ್ರಸಾರಕ್ಕೆ ಸುಪ್ರೀಂ ಒಪ್ಪಿಗೆ

ಕೋರ್ಟ್ ಕಲಾಪದ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಇದ್ರ ಪ್ರಾರಂಭ ಸುಪ್ರೀಂ ಕೋರ್ಟ್ ನಿಂದಲೇ ನಡೆಯಲಿದೆ. ಇದಕ್ಕೆ ನಿಯಮಗಳ ಪಾಲನೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎಂಎಂ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ಆಗಸ್ಟ್ 24ರಂದು ಅಟಾರ್ನಿ ಜನರಲ್ ವೇಣುಗೋಪಾಲ್ ರೂಪಿಸಿದ್ದ ನಿಯಮಾವಳಿಯನ್ನು ಆಲಿಸಿ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಕಲಾಪದಲ್ಲಿ ಜನರ ಸಂಖ್ಯೆ ಹೆಚ್ಚಾಗ್ತಿದ್ದು, ಅದನ್ನು ತಪ್ಪಿಸಲು ತೆರೆದ ನ್ಯಾಯಾಲಯದ ಸಿದ್ಧಾಂತವನ್ನು ಕಾರ್ಯಗತಗೊಳಿಸಲು ಬಯಸಿದೆ ಎಂದು ಪೀಠ ಹೇಳಿದೆ.

ಕೋರ್ಟ್ ಕಲಾಪದ ನೇರ ಪ್ರಸಾರ ಪಾರದರ್ಶಕತೆಯನ್ನು ಹೆಚ್ಚಿಸಲಿದೆ. ಮುಕ್ತ ನ್ಯಾಯಾಲಯದ ನಿಜವಾದ ತತ್ವ ಇದಾಗಿದೆ. ಮಾಧ್ಯಮಗಳು ತಪ್ಪಾಗಿ ವರದಿ ಮಾಡುವುದನ್ನು ಇದ್ರಿಂದ ತಪ್ಪಿಸಬಹುದು ಎಂದು ಕೋರ್ಟ್ ಹೇಳಿದೆ. ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸೇರಿದಂತೆ ಅನೇಕರು ಕಲಾಪವನ್ನು ನೇರ ಪ್ರಸಾರ ಮಾಡುವಂತೆ ಮನವಿ ಸಲ್ಲಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...