alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಮಿನಲ್ ಆರೋಪ ಹೊಂದಿದ ನಾಯಕರಿಗೆ ನೆಮ್ಮದಿ ನೀಡಿದ ಸುಪ್ರೀಂ

ಕ್ರಿಮಿನಲ್ ಮೊಕದ್ದಮೆ ಹೊತ್ತ ರಾಜಕಾರಣಿಗಳಿಗೆ ಸುಪ್ರೀಂ ಕೋರ್ಟ್ ನೆಮ್ಮದಿ ಸುದ್ದಿ ನೀಡಿದೆ. ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಶಾಸಕರು ಹಾಗೂ ಸಂಸದರನ್ನು ಅಪರಾಧ ಸಾಬೀತಾಗುವ ಮೊದಲೇ ಹುದ್ದೆಯಿಂದ ಕೆಳಗಿಳಿಸಬಾರದು ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಚಾರ್ಜ್ ಶೀಟ್ ಆಧಾರದ ಮೇಲೆ ಜನಪ್ರತಿನಿಧಿಗಳ ಮೇಲೆ ವಿಚಾರಣೆ ಸಾಧ್ಯವಿಲ್ಲ. ಚುನಾವಣೆ ಕಣಕ್ಕಿಳಿಯುವುದನ್ನು ಕೇವಲ ಚಾರ್ಜ್ ಶೀಟ್ ಆಧಾರದ ಮೇಲೆ ತಡೆಯಲು ಸಾಧ್ಯವಿಲ್ಲವೆಂದು ಕೋರ್ಟ್ ಹೇಳಿದೆ. ಕ್ರಿಮಿನಲ್ ಮೊಕದ್ದಮೆ ಹೊಂದಿರುವ ನಾಯಕರು ಚುನಾವಣೆಗೆ ಸ್ಪರ್ಧಿಸಬಹುದೆಂದು ಕೋರ್ಟ್ ತಿಳಿಸಿದೆ.

ಜನಸಾಮಾನ್ಯರಿಗೆ ತಮ್ಮ ನಾಯಕರ ಎಲ್ಲ ಮಾಹಿತಿಯಿರಬೇಕು. ಚುನಾವಣೆಗೆ ಸ್ಪರ್ಧಿಸುವ ಮೊದಲು ನಾಯಕರು ತಮ್ಮ ಕ್ರಿಮಿನಲ್ ದಾಖಲೆಯ ಮಾಹಿತಿಯನ್ನು ಜನರ ಮುಂದಿಡಬೇಕು. ಇದು ಸಂಸತ್ತಿನಲ್ಲಿ ಕಾನೂನಾಗಬೇಕೆಂದು ಕೋರ್ಟ್ ಹೇಳಿದೆ. ಇದಲ್ಲದೆ ಎಲ್ಲ ಪಕ್ಷಗಳು ಸ್ಪರ್ಧಾಳುಗಳ ಮಾಹಿತಿಯನ್ನು ತಮ್ಮ ವೆಬ್ಸೈಟ್ ನಲ್ಲಿ ನೀಡಬೇಕು. ಮೂರು ಬಾರಿ ಮುದ್ರಣ ಮಾಧ್ಯಮ ಹಾಗೂ ಒಂದು ಬಾರಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ದಾಖಲೆಗಳನ್ನು ನೀಡಬೇಕೆಂದು ಕೋರ್ಟ್ ಹೇಳಿದೆ.

ನಾಯಕನಿಗೆ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಯಾದ್ರೆ ಅವ್ರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದೆಂದು ಕೋರ್ಟ್ ತಿಳಿಸಿದೆ. ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ತೀರ್ಪು ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...