alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಲಿಂಗಕಾಮ’ ಕುರಿತು ಇಂದು ಸುಪ್ರೀಂ ತೀರ್ಪು

ಸಲಿಂಗಕಾಮ ಅಪರಾಧ ಎಂದು ಉಲ್ಲೇಖಿಸುವ ಸೆಕ್ಷನ್ 377ರ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸಲಿದೆ.

ಪೂರ್ವಾಹ್ನ 10:30 ಕ್ಕೆ ತೀರ್ಪು ಹೊರಬೀಳುವ ನಿರೀಕ್ಷೆಯಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸಹಿತ ಐವರು ನ್ಯಾಯಾಧೀಶರನ್ನೊಳಗೊಂಡ ಪಂಚಪೀಠ ಈ ಮಹತ್ವದ ತೀರ್ಪು ನೀಡಲಿದೆ.

ಖಾಸಗಿಯಾಗಿ ನಡೆಸುವ ವಯಸ್ಕರ ಒಮ್ಮತದ ಕಾರ್ಯಗಳನ್ನು ಅಪರಾಧ ಎಂಬ ದಂಡಸಂಹಿತೆಯ ನಿಯಮ ಸಾಂವಿಧಾನಿಕವಾಗಿ ಮಾನ್ಯವೋ ಎಂಬುದನ್ನು ನಿರ್ಧರಿಸುವುದು ಸುಪ್ರೀಂ ಕೋರ್ಟ್ ವಿವೇಚನೆಗೆ ಬಿಟ್ಟ ವಿಚಾರ ಎಂದು ಜು.11ರಂದು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಹೇಳಿತ್ತು.

ಸೆಕ್ಷನ್ 377ರ ಅಡಿಯಲ್ಲಿ ಈ ವಿಷಯ ಮಾತ್ರ ಸಂವಿಧಾನ ಪೀಠ ನಿರ್ಧರಿಸಬೇಕು. ಇದರ ಹೊರತಾಗಿ ಸೆಕ್ಷನ್ 377ರ ಮಾನ್ಯತೆಯ ಕುರಿತು ಚರ್ಚಿಸಿದರೆ ಅದು ಇತರೆ ಅನೇಕ ಕಾನೂನುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿದ್ದ ಆ ಅಫಿಡವಿಟ್‌ನಲ್ಲಿ ಉಲ್ಲೇಖಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...