alex Certify
ಕನ್ನಡ ದುನಿಯಾ       Mobile App
       

Kannada Duniya

”ದೇಶದ ಜನರಿಗೆ ಸಸ್ಯಾಹಾರಿಗಳಾಗುವಂತೆ ಆದೇಶ ನೀಡಲು ಸಾಧ್ಯವಿಲ್ಲ”

ದೇಶದ ಎಲ್ಲ ಜನರಿಗೂ ಸಸ್ಯಹಾರಿಗಳಾಗುವಂತೆ ಆದೇಶ ನೀಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಮಾಂಸ ಹಾಗೂ ಚರ್ಮದ ವಸ್ತುಗಳ ಮೇಲೆ ರಫ್ತು ನಿಷೇಧಕ್ಕೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಈ ಹೇಳಿಕೆ ನೀಡಿದೆ. ಈ ಪ್ರಕರಣವನ್ನು ಕೋರ್ಟ್ ಮುಂದಿನ ವರ್ಷ ಕೈಗೆತ್ತಿಕೊಳ್ಳಲಿದೆಯಂತೆ.

ಎಲ್ಲರೂ ಸಸ್ಯಹಾರಿಗಳಾಗಿ ಎಂದು ನಾವು ಆದೇಶ ಹೊರಡಿಸಲು ಸಾಧ್ಯವಿಲ್ಲವೆಂದು ನ್ಯಾಯಮೂರ್ತಿ ಮದನ್ ಬಿ ಲೋಕುರ್ ಹೇಳಿದ್ದಾರೆ. ದೇಶದ ಎಲ್ಲ ಜನರು ಸಸ್ಯಹಾರಿಗಳಾಗ್ಲಿ ಎಂದು ನೀವು ಬಯಸ್ತೀರಾ ಎಂದು ಅರ್ಜಿದಾರರಿಗೆ ಪ್ರಶ್ನೆ ಮಾಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿಯಲ್ಲಿ ನಡೆಯಲಿದೆ.

ಬುಧವಾರ ಕೆಲ ಹಿಂದುವಾದಿ ಸಂಘಟನೆಗಳು ನವರಾತ್ರಿ ಸಂದರ್ಭದಲ್ಲಿ ಮಾಂಸದಂಗಡಿ ಬಾಗಿಲು ಮುಚ್ಚಬೇಕೆಂದು ಪ್ರತಿಭಟನೆ ನಡೆಸಿದ್ದರು. ದೆಹಲಿಯ ಕೆಲ ಪ್ರದೇಶಗಳಲ್ಲಿರುವ ಮಾಂಸದಂಗಡಿ ಮೇಲೆ ದಾಳಿ ನಡೆಸಿದ್ದರು. ಒತ್ತಾಯಪೂರ್ವಕವಾಗಿ ಮಾಂಸದಂಗಡಿ ಬಾಗಿಲು ಮುಚ್ಚಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...