alex Certify
ಕನ್ನಡ ದುನಿಯಾ       Mobile App
       

Kannada Duniya

ತಾಜ್ ಮಹಲ್ ನಲ್ಲಿ ನಡೆಯುವ ನಮಾಜ್ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂ

ತಾಜ್ ಮಹಲ್ ನಲ್ಲಿ ಹೊರಗಿನವರ ನಮಾಜ್ ಗೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದು. ನಮಾಜನ್ನು ಬೇರೆ ಮಸೀದಿಗಳಲ್ಲಿ ಕೂಡ ಮಾಡಬಹುದು ಎಂದು ಕೋರ್ಟ್ ಹೇಳಿದೆ.

ಈ ವರ್ಷ ಜನವರಿ 24ರಂದು ಆಗ್ರಾದ ಆಡಳಿತಾಧಿಕಾರಿಗಳು ತಾಜ್ ಮಹಲ್ ಪರಿಸರದಲ್ಲಿರುವ ಮಸೀದಿಯಲ್ಲಿ ಹೊರಗಿನ ಜನರು ನಮಾಜ್ ಮಾಡುವುದನ್ನು ತಡೆದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಅರ್ಜಿ ಸಲ್ಲಿಸಲಾಗಿತ್ತು. ಇದ್ರ ವಿಚಾರಣೆ ನಡೆಸಿದ ಕೋರ್ಟ್, ತಾಜ್ ಮಹಲ್ ವಿಶ್ವದ 7 ಅದ್ಭುತಗಳಲ್ಲಿ ಒಂದು. ಪಾರ್ಥನೆಗೆ ಬೇರೆ ಮಸೀದಿ ಇದೆ ಎಂದಿದೆ.

ತಾಜ್ ಮಹಲ್ ಪರಿಸರದಲ್ಲಿರುವ ಮಸೀದಿಯಲ್ಲಿ ಪ್ರತಿ ಶುಕ್ರವಾರ ಪ್ರಾರ್ಥನೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಆದ್ರೆ ಹೊರಗಿನವರಿಗೆ ಪಾರ್ಥನೆಗೆ ಅನುಮತಿಯಿಲ್ಲ. ಇದಾಗ್ಯೂ ತಾಜ್ ಮಹಲ್ ನಲ್ಲಿ ಪಾರ್ಥನೆ ಮಾಡುವುದನ್ನು ಅನೇಕ ಸಂಘಟನೆಗಳು ವಿರೋಧಿಸಿವೆ. ತಾಜ್ ಮಹಲ್ ನಲ್ಲಿ ಚಾಲೀಸ್ ಓದಲು ಅನುಮತಿ ನೀಡುವಂತೆಯೂ ಬೇಡಿಕೆಯಿಟ್ಟಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...