alex Certify
ಕನ್ನಡ ದುನಿಯಾ       Mobile App
       

Kannada Duniya

ಎನ್.ಜಿ.ಓ. ಗಳಿಗೆ ಬಿಸಿ ಮುಟ್ಟಿಸಿದ ಸುಪ್ರೀಂ

supreme-court_sxpolou

ಎನ್ ಜಿ ಓ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ದೇಶದಾದ್ಯಂತ ಇರುವ ಎನ್ ಜಿ ಓ ಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ದೇಶದಲ್ಲಿರುವ ಎಲ್ಲ ಎನ್ ಜಿ ಓ ಗಳ ಆಡಿಟ್ ನಡೆಸುವಂತೆ ಖಡಕ್ ಆದೇಶ ನೀಡಿದೆ.

ದೇಶದಾದ್ಯಂತ 32 ಲಕ್ಷಕ್ಕೂ ಹೆಚ್ಚು ಎನ್ ಜಿ ಓ ಗಳಿವೆ. ಸರ್ಕಾರದಿಂದ ಧನ ಸಹಾಯ ಪಡೆಯುತ್ತಿರುವ ಎನ್ ಜಿ ಓ ಗಳು ಅದನ್ನು ಯಾವುದಕ್ಕೆ ಬಳಸ್ತಿದ್ದಾರೆನ್ನುವ ಬಗ್ಗೆ ಸರಿಯಾದ ಮಾಹಿತಿ ನೀಡ್ತಾ ಇಲ್ಲ. ಹಾಗಾಗಿ ಮಾರ್ಚ್ 31 ರೊಳಗಾಗಿ ಎಲ್ಲ ಎನ್ ಜಿ ಓ ಗಳ ಆಡಿಟ್ ನಡೆಸುವಂತೆ ಸುಪ್ರೀಂ ಆದೇಶ ನೀಡಿದೆ.

ದುಂದುವೆಚ್ಚ ಮಾಡುತ್ತಿರುವ ಎನ್ ಜಿ ಓ ಗಳಿಗೆ ನೀಡಿರುವ ಹಣವನ್ನು ವಾಪಸ್ ಪಡೆಯುವ ಜೊತೆಗೆ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ. ವಿವಿಧ ಸಚಿವಾಲಯಗಳಿಂದ ಸುಮಾರು 9000 ಕೋಟಿ ಹಣ ಎನ್ ಜಿ ಓ ಹಾಗೂ ಸ್ವಯಂಸೇವಾ ಸಂಸ್ಥೆಗಳಿಗೆ ಹೋಗ್ತಾ ಇದೆ. ಆದ್ರೆ ಇರುವ 32 ಲಕ್ಷ ಎನ್ ಜಿ ಓ ಗಳಲ್ಲಿ 3 ಲಕ್ಷ ಎನ್ ಜಿ ಓ ಗಳು ಮಾತ್ರ ಆಯವ್ಯಯ ವರದಿ ಸಲ್ಲಿಸ್ತಾ ಇವೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಖೇಹರ್ ಈ ಆದೇಶ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...