alex Certify
ಕನ್ನಡ ದುನಿಯಾ       Mobile App
       

Kannada Duniya

ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಪರಿಷ್ಕರಣೆ

ವರದಕ್ಷಿಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ತಾನು ಈ ಹಿಂದೆ ನೀಡಿದ್ದ ತೀರ್ಪನ್ನು ಪರಿಷ್ಕರಿಸಿದೆ.

ಈ ಹಿಂದಿನ ಆದೇಶದಲ್ಲಿ ಸುಪ್ರೀಂ ಕೋರ್ಟ್, ವರದಕ್ಷಿಣೆ ಪ್ರಕರಣಗಳಲ್ಲಿ ಆರೋಪಿಗಳನ್ನು ದೂರು ದಾಖಲಿಸಿದ ತಕ್ಷಣವೇ ಬಂಧಿಸಬಾರದು. ತನಿಖೆ ನಡೆಸಿ ಸತ್ಯಾಸತ್ಯತೆ ಕಂಡು ಬಂದರೆ ನಂತರ ಬಂಧಿಸಬೇಕು ಎಂದು ಹೇಳಿತ್ತು.

ಇದೀಗ ಈ ಆದೇಶವನ್ನು ಪರಿಷ್ಕರಿಸಲಾಗಿದ್ದು, ವರದಕ್ಷಿಣೆ ಪ್ರಕರಣ ದಾಖಲಾದ ವೇಳೆ ಆರೋಪಿ ಮತ್ತು ಆತನ ಕುಟುಂಬ ಸದಸ್ಯರನ್ನು ಬಂಧಿಸುವ ನಿರ್ಧಾರ ಪೊಲೀಸರಿಗೇ ಬಿಟ್ಟಿದೆ. ಇದರಿಂದಾಗಿ ವರದಕ್ಷಿಣೆ ಪ್ರಕರಣ ದಾಖಲಾದ ಕೂಡಲೇ ಬಂಧಿಸುವ ಅವಕಾಶವಿರುವ ಹಳೆ ನಿಯಮವೇ ಮುಂದುವರೆದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...