alex Certify
ಕನ್ನಡ ದುನಿಯಾ       Mobile App
       

Kannada Duniya

ಸುಪ್ರೀಂ ನ್ಯಾಯಮೂರ್ತಿಗಳ ಕುಟುಂಬಕ್ಕೂ ತಟ್ಟಿದೆ ಪ್ರವಾಹದ ಬಿಸಿ

ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ ಕುರಿಯನ್‌ ಜೋಸೆಫ್‌ ಕುಟುಂಬವೂ ಕೇರಳದ ಪ್ರವಾಹದಲ್ಲಿ ಸಿಲುಕಿಕೊಂಡಿದೆ. ಎರ್ನಾಕುಲಂನ ಕಲಾದಿಯಲ್ಲಿರುವ ಕುರಿಯನ್‌ ಅವರ ಸಹೋದರ ಹಾಗೂ ಸಹೋದರಿ ಪ್ರವಾಹದಿಂದ ಸಮಸ್ಯೆಗೆ ತುತ್ತಾಗಿದ್ದಾರೆ.

ಕೊಚ್ಚಿ ವಿಮಾನ ನಿಲ್ದಾಣದಿಂದ ಸುಮಾರು 7 ಕಿ.ಮೀ. ದೂರದಲ್ಲಿದ್ದ ಕುರಿಯನ್‌ ಕುಟುಂಬಕ್ಕೆ ಸುರಕ್ಷತೆ ಸಲುವಾಗಿ ಸ್ಥಳ ತೊರೆಯುವಂತೆ ರಕ್ಷಣಾ ತಂಡದವರು ಸೂಚಿಸಿದ್ದಾರೆ. ಮನೆ ಖಾಲಿ ಮಾಡಿರುವ ಸಹೋದರ ಹಾಗೂ ಸಹೋದರಿ ಈಗ ಸಂತ್ರಸ್ಥರ ಶಿಬಿರದಲ್ಲಿದ್ದಾರೆನ್ನಲಾಗಿದೆ. ಪ್ರವಾಹದಿಂದಾಗಿ ಮೂಲಭೂತ ಸೌಕರ್ಯಗಳಿಗೆ ತೊಡಕಾಗಿದ್ದು, ಮೊಬೈಲ್‌ ಕೆಲಸ ಮಾಡುತ್ತಿಲ್ಲ. ಹೀಗಾಗಿ ನ್ಯಾಯಮೂರ್ತಿಗಳು ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ.

ನವದೆಹಲಿಯಿಂದಲೂ ಕೇರಳಕ್ಕೆ ಪರಿಹಾರ ಸಾಮಾಗ್ರಿಗಳ ರವಾನಿಸಲಾಗುತ್ತಿದೆ. ಅಗತ್ಯ ವಸ್ತುಗಳನ್ನು ಬಾಕ್ಸ್‌ಗಳ ಮೂಲಕ ಕಳುಹಿಸಲಾಗುತ್ತಿದ್ದು, ಇನ್ನೂ ಅನೇಕ ಸಂಸ್ಥೆಗಳ ಸಹಾಯದಿಂದ ಆನ್‌ಲೈನ್‌ ಪರಿಹಾರವನ್ನೂ ನಡೆಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...