alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಪೇಮೆಂಟ್ ಸೇವೆ: ಕೇಂದ್ರ, ವಾಟ್ಸಾಪ್ ಕಂಪನಿಗೆ ಸುಪ್ರೀಂ ನೊಟೀಸ್

ಸಂದೇಶ ರವಾನೆ ಅಪ್ಲಿಕೇಷನ್ ವಾಟ್ಸಾಪ್ ನ ಪೇಮೆಂಟ್ ಸೇವೆ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಕೇಂದ್ರ ಸರ್ಕಾರ ಹಾಗೂ ವಾಟ್ಸಾಪ್ ಗೆ ನೊಟೀಸ್ ಜಾರಿ ಮಾಡಿದೆ. ನೊಟೀಸ್ ಗೆ ನಾಲ್ಕು ವಾರದಲ್ಲಿ ಉತ್ತರ ನೀಡುವಂತೆ ಸುಪ್ರೀಂ ಸೂಚನೆ ನೀಡಿದೆ.

ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಹಾಗೂ ಜಸ್ಟೀಸ್ ಇಂದೂ ಮಲ್ಹೋತ್ರಾ ನೇತೃತ್ವದ ಪೀಠ ಸೋಮವಾರ ‘ಸೆಂಟರ್ ಫಾರ್ ಅಕೌಂಟಬಿಲಿಟಿ ಅಂಡ್ ಸಿಸ್ಟಮ್ಯಾಟಿಕ್ ಚೇಂಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ವಾಟ್ಸಾಪ್, ರಿಸರ್ವ್ ಬ್ಯಾಂಕ್ ನ ಎಲ್ಲ ನಿಯಮಗಳನ್ನು ಪಾಲಿಸುವುದಿಲ್ಲವೊ ಅಲ್ಲಿಯವರೆಗೆ ವಾಟ್ಸಾಪ್ ಪೇಮೆಂಟ್ ಸರ್ವಿಸ್ ರದ್ದುಮಾಡಿ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ವಾಟ್ಸಾಪ್ ದೇಶದ ಕಾನೂನನ್ನು ಪಾಲನೆ ಮಾಡ್ತಿಲ್ಲ. ಬ್ಯಾಂಕ್ ಅಕೌಂಟ್ ತೆರೆಯುವ ವೇಳೆ ಕೆವೈಸಿ ನಿಯಮದ ಜೊತೆ ರಿಸರ್ವ್ ಬ್ಯಾಂಕ್ ನಿಯಮ ಪಾಲನೆ ಮಾಡಬೇಕು. ವಾಟ್ಸಾಪ್ ವಿದೇಶಿ ಕಂಪನಿಯಾಗಿದ್ದು, ಭಾರತದಲ್ಲಿ ಅದ್ರ ಕಂಪನಿ ಕೂಡ ಇಲ್ಲವೆಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...