alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಲಿಂಕ್ ಮಾಡದ ಬ್ಯಾಂಕ್ ಖಾತೆ ಸ್ಥಗಿತಕ್ಕೆ ಸುಪ್ರೀಂ ಹೇಳಿದ್ದೇನು?

ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ. ಲಿಂಕ್ ಮಾಡದೇ ಇದ್ದಲ್ಲಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಸಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

ಆಧಾರ್ ಲಿಂಕ್ ಮಾಡಿಲ್ಲ ಎಂಬ ಕಾರಣಕ್ಕೆ ಜನರ ಬ್ಯಾಂಕ್ ಖಾತೆಗಳನ್ನು ಅದ್ಹೇಗೆ ಫ್ರೀಝ್ ಮಾಡ್ತೀರಾ ಎಂದು ಪ್ರಶ್ನಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಮಾಹಿತಿ ಕಣ್ಗಾವಲಿನ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಫೇಸ್ಬುಕ್ ನಲ್ಲೂ ಜನರ ಡೇಟಾ ಸೋರಿಕೆಯಾಗುತ್ತಿರುವ ಬಗ್ಗೆ ಆತಂಕ ಹೊರಹಾಕಿದೆ. ಜನರ ಡೇಟಾ ರಕ್ಷಣೆಗೆ ಕಠಿಣ ಕಾನೂನು ಇಲ್ಲ. ಹಾಗಾಗಿ 1.3 ಬಿಲಿಯನ್ ಜನರ ಆಧಾರ್ ಡೇಟಾವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಅನ್ನೋದು ಸುಪ್ರೀಂ ಕೋರ್ಟ್ ಅಭಿಪ್ರಾಯ.

ಆಧಾರ್ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಮನಿ ಲಾಂಡರಿಂಗ್ ತಡೆಗಟ್ಟುವ ಉದ್ದೇಶದಿಂದ ಆಧಾರ್ ಲಿಂಕ್ ಮಾಡದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವುದಾಗಿ ಸರ್ಕಾರಿ ವಕೀಲರು ವಾದಿಸಿದ್ರು.

ಆದ್ರೆ ಆಧಾರ್ ಲಿಂಕ್ ಮಾಡದೇ ಇದ್ದವರೆಲ್ಲ ಅಕ್ರಮ ಹಣಕಾಸು ವಹಿವಾಟು ನಡೆಸುತ್ತಿದ್ದಾರೆ ಎಂದರ್ಥವಲ್ಲ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ಬ್ಯಾಂಕ್ ಖಾತೆ ಫ್ರೀಝ್ ಮಾಡುವ ಹೊಸ ನಿಯಮ ಎಷ್ಟು ಸರಿ ಅಂತಾ ಪ್ರಶ್ನೆ ಹಾಕಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...