alex Certify
ಕನ್ನಡ ದುನಿಯಾ       Mobile App
       

Kannada Duniya

ರೇಪ್ ಬೆಲೆ 6500 ರೂಪಾಯಿಯೇ? ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

ರೇಪ್ ಪೀಡಿತರಿಗೆ ಕನಿಷ್ಠ ಹಣ ನಿಗದಿಪಡಿಸಿದ ವಿಷ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಗುರುವಾರ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆಘಾತಕಾರಿ ಪ್ರಶ್ನೆಯೊಂದನ್ನು ಕೇಳಿದೆ. ರೇಪ್ ಬೆಲೆಯನ್ನು 6500 ರೂಪಾಯಿ ನಿಗದಿಪಡಿಸಿದ್ದೀರಾ ಎಂದು ಸುಪ್ರೀಂ ಕೋರ್ಟ್ ಮಧ್ಯ ಪ್ರದೇಶ ಸರ್ಕಾರವನ್ನು ಪ್ರಶ್ನೆ ಮಾಡಿದೆ.

ನಿರ್ಭಯ ನಿಧಿ ಯೋಜನೆಯಡಿ ಅತ್ಯಧಿಕ ಹಣ ಪಡೆದ ರಾಜ್ಯಗಳಲ್ಲಿ ಮಧ್ಯಪ್ರದೇಶ ಮುಂದಿದೆ. ಆದ್ರೆ ಇಲ್ಲಿನ ಸರ್ಕಾರ ಅತ್ಯಾಚಾರ ಪೀಡಿತರಿಗೆ ಆರು ಸಾವಿರದಿಂದ ಆರೂವರೆ ಸಾವಿರ ರೂಪಾಯಿ ಮಾತ್ರ ನೀಡ್ತಿದೆ ಎಂದು ಸುಪ್ರೀಂ ಹೇಳಿದೆ. ಜಸ್ಟೀಸ್ ಮದನ್ ಬಿ ಲೋಕುರ್ ಹಾಗೂ ದೀಪಕ್ ಗುಪ್ತಾ ಪೀಠ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರಾಜ್ಯದಲ್ಲಿ 1951 ಅತ್ಯಾಚಾರ ನಡೆದಿದೆ. ಆದ್ರೆ ಪೀಡಿತೆಯರಿಗೆ ಸರ್ಕಾರ ಕಡಿಮೆ ಹಣವನ್ನು ನೀಡ್ತಿದೆ. ಇದು ಪ್ರಶಂಸನೀಯವಾ ಎಂದು ಸುಪ್ರೀಂ ಕೋರ್ಟ್ ಸರ್ಕಾರವನ್ನು ಪ್ರಶ್ನೆ ಮಾಡಿದೆ.

ನಿರ್ಭಯ ನಿಧಿಯಡಿ ರಾಜ್ಯ ಸರ್ಕಾರಗಳು ಅತ್ಯಾಚಾರ ಪೀಡಿತರಿಗೆ ಹೆಚ್ಚು ಹಣ ನೀಡ್ತಿವೆ ಹಾಗೂ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಾಚಾರಕ್ಕೊಳಗಾದವರ ಸಂಖ್ಯೆ ಎಷ್ಟಿದೆ ಎನ್ನುವ ಬಗ್ಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ಆದೇಶ ನೀಡಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...