
ಅನೇಕ ವರ್ಷಗಳಿಂದ ಚರ್ಚೆಗೆ ಕಾರಣವಾಗಿರುವ ಇಚ್ಛಾ ಮರಣದ ಬಗ್ಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಐದು ನ್ಯಾಯಮೂರ್ತಿಗಳ ಪೀಠ ಕೆಲವೊಂದು ಷರತ್ತಿನ ಜೊತೆ ಇಚ್ಛಾ ಮರಣಕ್ಕೆ ಅನುಮತಿ ನೀಡಿದೆ. ಇಚ್ಛಾ ಮರಣಕ್ಕೆ ಅರ್ಜಿ ಸಲ್ಲಿಸುವವರ ಗೌರವದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ.
ಚಿಕಿತ್ಸೆ ಅಸಂಭವ ಎಂಬ ಪರಿಸ್ಥಿತಿಯಲ್ಲಿ ರೋಗಿಗಳ ಸಂಬಂಧಿಕರು ಹೈಕೋರ್ಟ್ ನಲ್ಲಿ ಇಚ್ಛಾ ಮರಣಕ್ಕೆ ಅರ್ಜಿ ಸಲ್ಲಿಸಬಹುದೆಂದು ಸುಪ್ರೀಂ ಕೋರ್ಟ್ ಹೇಳಿದೆ. ಅನಾರೋಗ್ಯ ವ್ಯಕ್ತಿ ಯಾವಾಗ ಇಚ್ಛಾ ಮರಣ ಪಡೆಯಬೇಕೆಂಬುದನ್ನು ತೀರ್ಮಾನಿಸಬೇಕೆಂದು ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.
ರೋಗಿಗೆ ಚಿಕಿತ್ಸೆ ಅಸಾಧ್ಯವೆಂದು ವೈದ್ಯಕೀಯ ಬೋರ್ಡ್ ಘೋಷಣೆ ಮಾಡಬೇಕಾಗುತ್ತದೆ. ಐದು ನ್ಯಾಯಮೂರ್ತಿಗಳ ಪೀಠ ಕಳೆದ ವರ್ಷ ಅಕ್ಟೋಬರ್ ನಲ್ಲಿ ವಿಚಾರಣೆ ನಡೆಸಿ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.