alex Certify
ಕನ್ನಡ ದುನಿಯಾ       Mobile App
       

Kannada Duniya

”ಸಿಮ್ ದುರುಪಯೋಗ ತಡೆಗೆ ನಿಯಮ ರೂಪಿಸಿ”

sc_s8zokdc

ಸಿಮ್ ಕಾರ್ಡ್ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಸಿಮ್ ಕಾರ್ಡ್ ದುರುಪಯೋಗ ತಡೆಯಲು ಒಂದು ವರ್ಷದೊಳಗೆ ನಿಯಮ ರೂಪಿಸುವಂತೆ ಸೂಚನೆ ನೀಡಿದೆ. ಲೋಕ ನೀತಿ ಫೌಂಡೇಶನ್ ಹೆಸರಿನ ಎನ್ಜಿಒ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ನಿರ್ದೇಶನ ನೀಡಿದೆ.

ಮೊಬೈಲ್ ಮೂಲಕವೇ ಈಗ ಬ್ಯಾಂಕಿಂಗ್ ವ್ಯವಹಾರ ನಡೆಯುತ್ತಿರುವುದರಿಂದ ಸಿಮ್ ಪರಿಶೀಲನೆ ಬಹಳ ಮಹತ್ವ ಪಡೆದಿದೆ. ಹಾಗಾಗಿ ಸಿಮ್ ದುರುಪಯೋಗವಾಗಲು ಸಾಧ್ಯವಾಗದಂತಹ ನಿಯಮವನ್ನು ಒಂದು ವರ್ಷದೊಳಗೆ ರೂಪಿಸಿ ಎಂದು ಕೇಂದ್ರಕ್ಕೆ ಸುಪ್ರೀಂ ಹೇಳಿದೆ. ಹಾಗೆ ಮೊಬೈಲ್ ನಂಬರ್ ನೀಡಲು ಆಧಾರ್ ಕಾರ್ಡ್ ಕಡ್ಡಾಯ ಮಾಡುವಂತೆ ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...