alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಸಂತ್ರಸ್ಥರ ಹೆಸರು ಬಹಿರಂಗಪಡಿಸದಂತೆ ಸುಪ್ರೀಂ ಎಚ್ಚರಿಕೆ

ಸತ್ತವರಿಗೂ ಘನತೆ ಇದೆ, ಅವರ ಹೆಸರು ಹೇಳುವುದು ಅಥವಾ ಅವಮಾನಿಸುವುದು ತಪ್ಪು ಅಂತಾ ಸುಪ್ರೀಂ ಕೋರ್ಟ್ ಹೇಳಿದೆ. ಅತ್ಯಾಚಾರ ಸಂತ್ರಸ್ಥರ ಹೆಸರು, ವಿವರ ಬಹಿರಂಗಪಡಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅತ್ಯಾಚಾರ ಸಂತ್ರಸ್ಥರು ಬದುಕಿರಲಿ ಅಥವಾ ಸತ್ತಿರಲಿ, ಅಪ್ರಾಪ್ತರಾಗಿರಲಿ ಅಥವಾ ಪ್ರಾಪ್ತರೇ ಆಗಿರಲಿ ಅವರ ಗುರುತನ್ನು ಬಹಿರಂಗಪಡಿಸಬಾರದು. ಯಾಕಂದ್ರೆ ಆ ಕಹಿ ಘಟನೆ ಅವರ ಜೀವನದುದ್ದಕ್ಕೂ ಕಾಡುತ್ತದೆ ಅಂತಾ ಸುಪ್ರೀಂ ಕೋರ್ಟ್ ಹೇಳಿದೆ.

ಜಸ್ಟಿಸ್ ಮದನ್ ಬಿ ಲೋಕುರ್ ಹಾಗೂ ದೀಪಕ್ ಗುಪ್ತಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪೋಷಕರು ಒಪ್ಪಿದಲ್ಲಿ ಮಾತ್ರ ಅಪ್ರಾಪ್ತ ಸಂತ್ರಸ್ಥೆಯ ಗುರುತನ್ನು ಬಹಿರಂಗಪಡಿಸಬಹುದು ಅಂತಾ ಹೇಳಿದೆ. ಸಂತ್ರಸ್ಥೆ ಮಾನಸಿಕ ಅಸ್ವಸ್ಥೆಯಾಗಿದ್ದರೂ ಆಕೆಗೂ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕಿದೆ ಅಂತಾ ಸ್ಪಷ್ಟಪಡಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...