alex Certify
ಕನ್ನಡ ದುನಿಯಾ       Mobile App
       

Kannada Duniya

70 ವರ್ಷಗಳ ಬಳಿಕ ಕಾಣಲಿದ್ದಾನೆ ದೊಡ್ಡ ಚಂದ್ರ

earths-moon

ಈ ಕಾರ್ತೀಕ ಪೂರ್ಣಿಮೆಯಂದು ಪ್ರಕೃತಿ ವಿಸ್ಮಯ ನಡೆಯಲಿದೆ. 21ನೇ ಶತಮಾನದ ಅತಿ ದೊಡ್ಡ ಚಂದ್ರನನ್ನು ನೋಡುವ ಅವಕಾಶ ಸಿಗಲಿದೆ. ನವೆಂಬರ್ 14ರಂದು ಚಂದ್ರ, ಭೂಮಿಯ ಹತ್ತಿರಕ್ಕೆ ಬರಲಿದ್ದಾನೆ. ಕಾರ್ತೀಕ ಪೂರ್ಣಿಮೆಯಂದು ದೊಡ್ಡ ಚಂದ್ರನನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

ಅಂದು ಶೇಕಡಾ 14 ರಷ್ಟು ದೊಡ್ಡ ಹಾಗೂ 30 ಪ್ರತಿಶತ ಪ್ರಕಾಶಮಾನವಾಗಿ ನೋಡಬಹುದಾಗಿದೆ. ಇದೊಂದು ಅದ್ಬುತ ಕ್ಷಣವಾಗಲಿದೆ. ನವೆಂಬರ್ 14 ರ ನಂತ್ರ 2034ರಲ್ಲಿ ಮತ್ತೆ ಈ ಅವಕಾಶ ಸಿಗಲಿದೆ.  2034 ರ ನವೆಂಬರ್ 25 ರಂದು ಮತ್ತೆ ಚಂದ್ರ ಭೂಮಿಯ ಹತ್ತಿರಕ್ಕೆ ಬರಲಿದ್ದಾನೆ.

ನೀವು ಎಲ್ಲಿ ಚಂದ್ರನನ್ನು ನೋಡ್ತೀರಾ ಎನ್ನುವ ವಿಷಯವೂ ಇಲ್ಲಿ ಮಹತ್ವ ಪಡೆಯುತ್ತದೆ. ಸುಂದರ, ಹೊಳಪುಳ್ಳ ಚಂದ್ರನನ್ನು ನೋಡಲು ನೀವು ಅತಿ ಎತ್ತರದ ಪ್ರದೇಶಕ್ಕೆ ಹೋಗುವುದು ಒಳ್ಳೆಯದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...