alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪತ್ನಿಗೆ ಲಕ್ಷ ಲಕ್ಷ ಜೀವನಾಂಶ ಕೊಡಬೇಕು ಈ ಸಿರಿವಂತ

ಪತ್ನಿಯನ್ನು ತ್ಯಜಿಸಿರುವ ಕೋಟ್ಯಾಧಿಪತಿಗೆ ದೆಹಲಿ ಕೋರ್ಟ್ ಶಾಕ್ ಕೊಟ್ಟಿದೆ. ಅಪ್ರಾಪ್ತ ಮಗಳು ಹಾಗೂ ಪತ್ನಿಯನ್ನು ನಡು ನೀರಲ್ಲಿ ಕೈಬಿಟ್ಟಿರೋದ್ರಿಂದ ಪ್ರತಿ ತಿಂಗಳು ಅವರಿಗೆ 4 ಲಕ್ಷ ರೂಪಾಯಿ ಜೀವನಾಂಶ ಕೊಡುವಂತೆ ಆದೇಶಿಸಿದೆ. ಈ ಮೊತ್ತ ವರ್ಷಕ್ಕೆ ಶೇ.15ರಷ್ಟು ಹೆಚ್ಚಳವಾಗಲಿದೆ.

ಆತನೊಬ್ಬ ಶ್ರೀಮಂತ ಉದ್ಯಮಿ. ಬ್ಯುಸಿನೆಸ್ ಮ್ಯಾಗಝೀನ್ ಒಂದರಲ್ಲಿ ಪ್ರಕಟವಾದ ಶ್ರೀಮಂತರ ಪಟ್ಟಿಯಲ್ಲೂ ಅವನ ಹೆಸರಿತ್ತು. ಆತನ ಬಳಿಯಿರೋ ಒಟ್ಟಾರೆ ಆಸ್ತಿ 1000 ಕೋಟಿ ರೂಪಾಯಿಯಂತೆ. ಹಾಗಾಗಿ ಪತ್ನಿಗೆ ಪ್ರತಿ ತಿಂಗಳು 4 ಲಕ್ಷ ಜೀವನಾಂಶ ಕೊಡುವಂತೆ ನ್ಯಾಯಾಲಯ ಆದೇಶಿಸಿದೆ.

ಇನ್ನೆರಡು ವರ್ಷಗಳಲ್ಲಿ ಆತನ ಆರ್ಥಿಕ ಸ್ಥಿತಿ ಇನ್ನಷ್ಟು ಸುಧಾರಿಸುವುದರಿಂದ ಜೀವನಾಂಶ ಮೊತ್ತ ಕೂಡ ವರ್ಷದಿಂದ ವರ್ಷಕ್ಕೆ ಶೇ.15ರಷ್ಟು ಏರಿಕೆಯಾಗಲಿದೆ ಅಂತಾ ನ್ಯಾಯಾಧೀಶರು ಹೇಳಿದ್ದಾರೆ. 2011-12ರಲ್ಲೇ ಪರಿತ್ಯಕ್ತ ಪತ್ನಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು.

ಆಗ ಅವನ ಆಸ್ತಿಗೂ ಈಗಿನ ಮೌಲ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆತನ ಆಸ್ತಿ ಮೌಲ್ಯ ದುಪ್ಪಟ್ಟಾಗಿರೋದನ್ನು ಕೋರ್ಟ್ ಗಮನಿಸಿದೆ. ಹಾಗಾಗಿ ಜೀವನಾಂಶ ಮೊತ್ತವನ್ನು 4 ಲಕ್ಷ ರೂಪಾಯಿಗೆ ನಿಗದಿ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...