alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರೇ ತಿಂಗಳಲ್ಲಿ 3700 ಕೋಟಿ ರೂ. ಗಳಿಕೆ…!

mittle

ಲಖ್ನೋ: ನೋಟ್ ಬ್ಯಾನ್ ಬಳಿಕ ಜನ ಹಣಕ್ಕಾಗಿ ಪರದಾಡುತ್ತಿರುವಾಗ, ವಂಚಕನೊಬ್ಬ ಕೇವಲ 3 ತಿಂಗಳ ಅವಧಿಯಲ್ಲಿ ಬರೋಬ್ಬರಿ 3700 ಕೋಟಿ ರೂ. ಗಳಿಸಿದ್ದಾನೆ.

ನೋಯ್ಡಾದ ಅನುಭವ್ ಮಿತ್ತಲ್ 3 ತಿಂಗಳ ಹಿಂದೆ ಕಂಪನಿ ಆರಂಭಿಸಿದ್ದು, ಆನ್ ಲೈನ್ ನಲ್ಲಿ ಸೋಷಿಯಲ್ ಟ್ರೀಟ್ ಹೆಸರಲ್ಲಿ ವಂಚಿಸಿದ್ದಾನೆ.

ಚೈನ್ ಲಿಂಕ್ ಮೂಲಕ ಸದಸ್ಯತ್ವ ಮಾಡಿಕೊಂಡಿದ್ದು, 5000 ರೂ.ನಿಂದ 57,000 ರೂ.ವರೆಗೆ ಸದಸ್ಯತ್ವ ಶುಲ್ಕ ಪಡೆದುಕೊಂಡಿದ್ದಾನೆ.

ಬೇರೆ ಕಂಪನಿಗಳನ್ನು ‘ಲೈಕ್’ ಮಾಡಿದಲ್ಲಿ 5000 ರೂ. ಹಣ ಕೊಡುವುದಾಗಿ ಆಮಿಷ ತೋರಿದ್ದಾನೆ. ಹೀಗೆ ಅಪಾರ ಸಂಖ್ಯೆಯ ಜನರನ್ನು ವಂಚಿಸಿ, 3700 ಕೋಟಿ ರೂ. ಗಳಿಸಿದ್ದಾನೆ.

ಅನುಭವ್ ಮಿತ್ತಲ್ ವಂಚನೆಯಿಂದ ಬಾಲಿವುಡ್ ಬೆಡಗಿಯರಾದ ಸನ್ನಿಲಿಯೊನ್ ಹಾಗೂ ಅಮಿಷಾ ಪಟೇಲ್ ಕೂಡ ವಿಚಾರಣೆ ಎದುರಿಸುವಂತಾಗಿದೆ.

ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಶೇಷ ತನಿಖಾ ದಳದಿಂದ ತನಿಖೆಗೆ ಆದೇಶಿಸಿದೆ.

ಅನುಭವ್ ಮಿತ್ತಲ್ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕಾರಣಕ್ಕೆ ಸನ್ನಿ ಲಿಯೊನ್ ಹಾಗೂ  ಅಮಿಷಾ ಪಟೇಲ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...