alex Certify
ಕನ್ನಡ ದುನಿಯಾ       Mobile App
       

Kannada Duniya

ವರದಿಗಾರನಿಗೆ ಕಪಾಳಮೋಕ್ಷ ಮಾಡಿದ ಸನ್ನಿ ಲಿಯೋನ್

sunny-leoneಹೋಳಿ ಹಬ್ಬದ ಮುನ್ನಾ ದಿನ ಕಾರ್ಯಕ್ರಮವೊಂದರ ನಿಮಿತ್ತ ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಬಾಲಿವುಡ್ ನಟಿ ಸನ್ನಿ ಲಿಯೋನ್, ಗುಜರಾತಿನ ಸೂರತ್ ಗೆ ತೆರಳಿದ್ದ ವೇಳೆ ವರದಿಗಾರನೊಬ್ಬನಿಗೆ ಕಪಾಳಮೋಕ್ಷ ಮಾಡಿ ಸುದ್ದಿಯಾಗಿದ್ದಾರೆ.

ನೀಲಿ ಚಿತ್ರಗಳ ಮಾಜಿ ತಾರೆಯೂ ಆಗಿರುವ ಸನ್ನಿ ಲಿಯೋನ್ ಕಾರ್ಯಕ್ರಮದ ಆಯೋಜಕರಿಗೆ ಮಾಧ್ಯಮದವರು ಕಾರ್ಯಕ್ರಮದಲ್ಲಿ ಹಾಜರಿರದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದರಂತೆ. ಸನ್ನಿ, ಪತಿ ಜೊತೆಗೆ ಪಂಚತಾರಾ ಹೋಟೆಲ್ ನಲ್ಲಿ ತಂಗಿದ್ದು, ಹೋಟೆಲ್ ನಿಂದ ಹೊರ ಬರುತ್ತಿದ್ದ ವೇಳೆ ವರದಿಗಾರರೊಬ್ಬರು ಎದುರಾಗಿದ್ದಾರೆ.

ಅಲ್ಲಿಯೇ ಸನ್ನಿ ಲಿಯೋನ್ ಸಂದರ್ಶನ ಮಾಡಲು ಮುಂದಾದ ಅವರು, ನೀಲಿ ಚಿತ್ರಗಳಲ್ಲಿ ನಟಿಸಿದ್ದ ನೀವು ಈಗ ಎಷ್ಟು ಚಾರ್ಜ್ ಮಾಡುತ್ತಿದ್ದೀರಿ ಎಂದು ಕೇಳಿದ್ದಾರೆ. ಈ ಪ್ರಶ್ನೆ ಎದುರಾಗುತ್ತಿದ್ದಂತೆಯೇ ಸನ್ನಿಯ ಕೋಪ ನೆತ್ತಿಗೇರಿದೆ. ಮತ್ತೊಮ್ಮೆ ಪ್ರಶ್ನೆ ಕೇಳಿ ಎಂದ ಸನ್ನಿ, ವರದಿಗಾರ ಅದನ್ನು ಪುನರುಚ್ಚರಿಸುತ್ತಿದ್ದಂತೆಯೇ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದವರೆಲ್ಲ ಮೂಕ ವಿಸ್ಮಿತರಾಗಿ ನೋಡಿದ್ದಾರೆ. ಬಳಿಕ ಮಾತನಾಡಿದ ಸನ್ನಿ ಪತಿ ಡೇನಿಯಲ್ ವೆಬರ್, ವರದಿಗಾರನ ವಿರುದ್ದ ಪೊಲೀಸರಿಗೆ ದೂರು ಕೊಡಲು ನಿರ್ಧರಿಸಿದ್ದೆವು. ಆದರೆ ಸನ್ನಿ ಅಲ್ಲಿಯೇ ಸೂಕ್ತ ಉತ್ತರ ಕೊಟ್ಟಿರುವ ಕಾರಣ ನಿರ್ಧಾರ ಬದಲಿಸಿದ್ದೇವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...