alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ತಿ ದಾನ ಮಾಡಿದ ಮತ್ತೊಬ್ಬ ಉದ್ಯಮಿ

ಭಾರ್ತಿ ಎಂಟರ್ ಪ್ರೈಸಸ್ ಮಾಲೀಕ, ಉದ್ಯಮಿ ಸುನಿಲ್ ಭಾರ್ತಿ ಮಿತ್ತಲ್ 7000 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಮಿತ್ತಲ್ ಕುಟುಂಬ ಶಿಕ್ಷಣ ಕ್ಷೇತ್ರಕ್ಕೆ 7000 ಕೋಟಿ ಹಣವನ್ನು ಕೊಡುಗೆಯಾಗಿ ನೀಡಿದೆ. ಒಟ್ಟಾರೆ ಆಸ್ತಿಯನ್ನು ಶೇ.10ರಷ್ಟನ್ನು ದಾನ ಮಾಡಿದ್ದು, ಅದು ಭಾರ್ತಿ ಫೌಂಡೇಶನ್ ಗೆ ಸಲ್ಲಲಿದೆ.

ಭಾರ್ತಿ ಗ್ರೂಪ್ ಕೂಡ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದೆ. ಸಮಾಜದಿಂದ ಗಳಿಸಿದ ಹಣವನ್ನು ಸಮಾಜಕ್ಕೇ ನೀಡುವುದು ಸೂಕ್ತ ಅಂತಾ ಸುನಿಲ್ ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಅಭಿವೃದ್ಧಿಗೆ ಅಲ್ಪ ಕೊಡುಗೆ ನೀಡುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಅಂತಾ ಹೇಳಿದ್ದಾರೆ.

ಇತ್ತೀಚೆಗಷ್ಟೆ ಇನ್ಫೋಸಿಸ್ ಮುಖ್ಯಸ್ಥ ನಂದನ್ ನಿಲೇಕಣಿ ಕೂಡ ಆಸ್ತಿ ದಾನ ಮಾಡಿದ್ದರು. ಅದರ ಬೆನ್ನಲ್ಲೇ ಸುನಿಲ್ ಮಿತ್ತಲ್ ಕೂಡ ತಮ್ಮ ಆಸ್ತಿಯನ್ನು ದೇಣಿಗೆಯಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ. ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹಾಗೂ ಶೋಭಾ ಡೆವಲಪರ್ಸ್ ನ ಮೆನನ್ ಕೂಡ ಈ ಹಿಂದೆಯೇ ಆಸ್ತಿ ದಾನ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...