alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಕದ ಕಾರಣಕ್ಕೆ ಸಿಕ್ಕಿ ಬಿದ್ರು ಅಪಹರಣಕಾರರು

ದೆಹಲಿ ಗುರ್ಗಾವ್ ನ ಚಹಾ ವ್ಯಾಪಾರಿಯೊಬ್ಬರನ್ನ ಅಹಪರಿಸಲು ಯತ್ನಿಸಿದ ಇಬ್ಬರು ಅಪಹರಣಕಾರರು ಹಾಸ್ಯಾಸ್ಪದ ರೀತಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹರ್ಪಾಲ್ ಸಿಂಗ್ ಎಂಬ 48 ವರ್ಷದ ವ್ಯಕ್ತಿಯನ್ನ ಇಬ್ಬರು ಅಪಹರಣಕಾರರು ಸೋಮವಾರ ರಾತ್ರಿ ಅಪಹರಿಸುವ ಪ್ರಯತ್ನ ನಡೆಸಿದ್ದರು. ಇತ್ತೀಚೆಗಷ್ಟೆ ಹರ್ಪಾಲ್ ಸಿಂಗ್ ಹರಿಯಾಣ ಸರ್ಕಾರಕ್ಕೆ ತನ್ನ ಭೂಮಿಯನ್ನು ಮಾರಿದ್ದಕ್ಕಾಗಿ ಆತನಿಗೆ ಮೂರು ಕೋಟಿ ರೂಪಾಯಿ ಸಿಕ್ಕಿತ್ತು. ಈ ಮಾಹಿತಿ ಗೊತ್ತಿದ್ದ ಇಬ್ಬರು ಅಪಹರಣಕಾರರು ಹರ್ಪಾಲ್ ಸಿಂಗ್ ನನ್ನ ಅಪಹರಿಸಿ ಬೆದರಿಕೆ ಒಡ್ಡಿ ಆತನಿಂದ ಹಣ ವಸೂಲಿ ಮಾಡುವ ಯೋಜನೆ ಹಾಕಿಕೊಂಡಿದ್ದರು.

ಮಧ್ಯರಾತ್ರಿ ವೇಳೆ ಮನೆಗೆ ಬಂದ ಅಪಹರಣಕಾರರು ಹರ್ಪಾಲ್ ಸಿಂಗ್ ನನ್ನು ಅಪಹರಿಸಿ ಆತನ ಕೈಗಳನ್ನು ಕಟ್ಟಿ ಗನ್ ಪಾಯಿಂಟ್ನಲ್ಲಿಟ್ಟುಕೊಂಡಿದ್ದರು. ಕಾರಿನಲ್ಲಿ ಆತನನ್ನ ರಹಸ್ಯ ಸ್ಥಳವೊಂದಕ್ಕೆ ಕರೆದೊಯ್ಯೋದು ಅವರ ಯೋಜನೆಯಾಗಿತ್ತು. ಆ ಪ್ರಕಾರ ಹರ್ಪಾಲ್ ಸಿಂಗ್ ಗೆ ಕೂಲಿಂಗ್ ಗ್ಲಾಸ್ ಹಾಕಿಸಿ ಆತನನ್ನು ಕುರುಡ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದ್ದರು. ಆದ್ರೆ ಸನ್ ಗ್ಲಾಸ್ ಹಾಕಿಕೊಳ್ಳೋದಕ್ಕೆ ಹರ್ಪಾಲ್ ಸಿಂಗ್ ಅಡ್ಡಿಪಡಿಸುತ್ತಿದ್ದ. ಇದಕ್ಕಾಗಿ ಅಪಹರಣಕಾರರು ಆತನ ಮೇಲೆ ಹಲ್ಲೆಯನ್ನು ನಡೆಸಿದ್ದರು.

ಈ ವೇಳೆ ಅಪಹರಣಕಾರರಿಂದ ತಪ್ಪಿಸಿಕೊಂಡ ಹರ್ಪಾಲ್ ಸಿಂಗ್ ಮಾರುತಿ ಸುಜುಕಿ ಷೋ ರೂಮ್ ಬಳಿ ಇದ್ದ ಟೀ ಸ್ಟಾಲ್ ಒಂದರ ಬಳಿ ಓಡಿದ. ಅಲ್ಲಿಯ ಸಿಬ್ಬಂದಿ ಆತನನ್ನು ರಕ್ಷಿಸಿ ಆನಂತರ ಅಹಪರಣಕಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ರು.

ಮೂರು ಲಕ್ಷ ರೂಪಾಯಿಗೆ ಡಿಮ್ಯಾಂಡ್ ಇಡಬೇಕು ಅಂದುಕೊಂಡಿದ್ದ ಅಪಹರಣಕಾರರು ಆನಂತರ ಹೆಚ್ಚಿನ ಹಣಕ್ಕೆ ಬೇಡಿಕೆ ಇಡಬೇಕು ಅಂತಾ ನಿರ್ಧರಿಸಿದ್ದರು. ಆದ್ರೆ ಹರ್ಪಾಲ್ ಸಿಂಗ್ ನನ್ನ ಅಪಹರಿಸಿದ ನಂತರ ಆತ ಮೊಬೈಲ್ ಮನೆಯಲ್ಲೇ ಬಿಟ್ಟಿದ್ದಾನೆ ಅನ್ನೋದು ಖಚಿತವಾಯ್ತು. ಇದರಿಂದಲೂ ಅಪಹರಣಕಾರರಿಗೆ ಭಾರೀ ತೊಂದರೆ ಎದುರಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...