alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ನಿಲ್ಲಿಸಿದ ವಧು ಪ್ರೇಮಿ ಬೈಕ್ ಹತ್ತಿದ್ದನ್ನು ನೋಡ್ತ ಮೂಕ ಪ್ರೇಕ್ಷಕನಾದ ವರ…!

ಅದ್ಧೂರಿಯಾಗಿ ಮದುವೆ ನಡೆದಿತ್ತು. ಮಂಗಳ ವಾದ್ಯ ಮೊಳಗಿತ್ತು. ಅಗ್ನಿ ಸಾಕ್ಷಿಯಾಗಿ ಮದುವೆ ನಡೆದಿತ್ತು. ಸಪ್ತಪದಿ ತುಳಿದು ಬಂದವರೆಲ್ಲ ಊಟ ಮುಗಿಸಿ ಹೊರಟಿದ್ದರು. ವಧು-ವರ ಕೂಡ ಸಂಬಂಧಿಕರ ಜೊತೆ ಮನೆಗೆ ತೆರಳುತ್ತಿದ್ದರು.

ಕಾರಿನಲ್ಲಿ ಕುಳಿತಿದ್ದ ವಧು ಏಕಾಏಕಿ ತಲೆನೋವಿನ ನಾಟಕವಾಡಿದ್ದಾಳೆ. ವಾಂತಿ ಬರ್ತಿದೆ. ಕಾರು ನಿಲ್ಲಿಸಿ ಎಂದಿದ್ದಾಳೆ. ಕಾರು ರಸ್ತೆ ಬದಿ ನಿಂತಿದೆ. ವಧು ಕಾರಿನಿಂದ ಹೊರಗಿಳಿದಿದ್ದಾಳೆ. ಆಕೆಗೆ ನೆರವಾಗಲು ವರ ಕೂಡ ಇಳಿದಿದ್ದಾನೆ. ನೀವು ಕಾರಿನಲ್ಲಿರಿ ಎಂದು ವಾಪಸ್ ವರನನ್ನು ಕಾರಿಗೆ ಕಳುಹಿಸಿ ವಧು ಯಾರಿಗೋ ಕರೆ ಮಾಡಿದ್ದಾಳೆ.

ಹತ್ತು ನಿಮಿಷದ ನಂತ್ರ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಬೈಕ್ ತಂದು ವಧು ಮುಂದೆ ನಿಲ್ಲಿಸಿದ್ದಾನೆ. ವಧು ಬೈಕ್ ಏರಿದ್ದಾಳೆ. ಅಷ್ಟೇ, ಅಲ್ಲೇನು ನಡೆಯುತ್ತಿದೆ ಎಂಬುದು ಗೊತ್ತಾಗುವ ಮೊದಲೇ ವಧು ವರನಿಗೆ ಕೈ ಕೊಟ್ಟಾಗಿದೆ. ನಂತ್ರ ಪೊಲೀಸ್, ಹುಡುಗಿ ಕಡೆಯವರೆಲ್ಲ ಬಂದಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹುಡುಗ-ಹುಡುಗಿ ಮಾತ್ರ ಇನ್ನೂ ಸಿಕ್ಕಿಲ್ಲ. ಘಟನೆ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...