alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟರ್ಲೈಟ್ ಸ್ಥಾವರದಲ್ಲಿ ಸೋರಿಕೆಯಾಯ್ತು ಸಲ್ಫ್ಯೂರಿಕ್ ಆಸಿಡ್ : ಆತಂಕದಲ್ಲಿ ಸ್ಥಳಿಯರು

ತಮಿಳುನಾಡಿನ ಟುಟಿಕೊರಿನ್ ಸ್ಟರ್ಲೈಟ್ ವೇದಾಂತ್ ಸ್ಥಾವರ ವಿವಾದದಿಂದ ಹೊರ ಬರುವಂತೆ ಕಾಣ್ತಿಲ್ಲ. ಸ್ಥಾವರದಲ್ಲಿ ಅಪಾಯಕಾರಿ ಸಲ್ಫ್ಯೂರಿಕ್ ಆಸಿಡ್ ಸೋರಿಕೆಯಾಗಿದೆ ಎಂಬ ಸುದ್ದಿಯಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಟುಟಿಕೊರಿನ್ ಜಿಲ್ಲಾಧಿಕಾರಿ ಸಂದೀಪ್ ಸಲ್ಫ್ಯೂರಿಕ್ ಆಸಿಡ್ ಸೋರಿಕೆಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಸಲ್ಫ್ಯೂರಿಕ್  ಆಸಿಡನ್ನು ಟ್ಯಾಂಕ್ ನಲ್ಲಿ ಸಂಗ್ರಹಿಸಲಾಗಿತ್ತು. ಅದು ಸೋರಿಕೆಯಾಗಿದೆ. ಘಟನೆ ಹೇಗಾಯ್ತು ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಎಚ್ಚರಿಕೆಯಿಂದ ಇದನ್ನು ಸ್ವಚ್ಛಗೊಳಿಸಲಾಗ್ತಿದೆ ಎಂದು ಸಂದೀಪ್ ಹೇಳಿದ್ದಾರೆ.

ಸ್ಥಾವರದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಭಯ ಬೇಡ. ಸ್ಥಳಿಯರು ಆತಂಕಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಪ್ರತಿಭಟನೆ, ಹಿಂಸಾಚಾರದ ನಂತ್ರ ಸ್ಟರ್ಲೈಟ್ ಸ್ಥಾವರ ಮುಚ್ಚುವಂತೆ ಮೇ.29ರಂದೇ ಆದೇಶ ನೀಡಲಾಗಿದೆ. ಆದ್ರೂ ಸ್ಥಾವರದಲ್ಲಿ ಕೆಲಸ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...