alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಪ್ರವಾಹಕ್ಕೆ ಕಾರಣ ಏನು ಗೊತ್ತಾ…?

ತಮಿಳುನಾಡು ಸರ್ಕಾರ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರನ್ನು ಬಿಟ್ಟಿದ್ದೇ, ಪ್ರವಾಹಕ್ಕೆ ಕಾರಣ ಎಂದು ಕೇರಳ, ಸುಪ್ರೀಂ ಕೋರ್ಟ್‍ ನಲ್ಲಿ ವರದಿ ಸಲ್ಲಿಸಿದೆ.

ಗುರುವಾರ ಕೇರಳ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಮುಲ್ಲಪೆರಿಯಾರ್ ಆಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಇದ್ರಿಂದಾಗಿಯೇ ಇಡುಕಿ ಜಲಾಶಯದಿಂದ ನೀರು ಬಿಡಬೇಕಾದ ಅನಿವಾರ್ಯತೆ ಸೃಷ್ಠಿ ಆಯಿತು. ನೀರನ್ನು ಬಿಡುವಾಗ ತಮಿಳುನಾಡು ಮುಂಜಾಗರೂಕತೆ ವಹಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದ್ರೆ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.

ಕೇರಳ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಪ್ರವಾಹದಿಂದ ಕೇರಳಕ್ಕೆ ಆದ ಹಾನಿಯ ಬಗ್ಗೆಯೂ ತಿಳಿಸಿದೆ. 13 ಜಿಲ್ಲೆಗಳು, 1564 ಹಳ್ಳಿಗಳು ಪ್ರವಾಹ ಪೀಡಿತವಾಗಿವೆ. ಕೇರಳ ಜನ ಸಂಖ್ಯೆಯ ಆರನೇ ಒಂದು ಭಾಗದಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. 13 ಲಕ್ಷ ಜನ ಗಂಜಿ ಕೇಂದ್ರಗಳಿಗೆ ತೆರಳುವಂತಾಗಿದೆ ಎಂದು ಹೇಳಿದೆ. ಜಲಾಶಯದ ಎತ್ತರವನ್ನು 142 ಅಡಿಯಿಂದ 139 ಅಡಿಗೆ ಇಳಿಸಲು ತಮಿಳುನಾಡು ಸರಕಾರ ತಿರಸ್ಕರಿಸಿರುವುದನ್ನು ಅರ್ಜಿಯಲ್ಲಿ ತಿಳಿಸಿದೆ.

ಮುಲ್ಲಪೆರಿಯಾರ್ ಜಲಾಶಯ ಕೇರಳದಲ್ಲಿದ್ದರೂ, ತಮಿಳುನಾಡಿನ ನಿಯಂತ್ರಣದಲ್ಲಿದೆ. ಕೇರಳ ಜಲಾಶಯವನ್ನು ತನ್ನ ಸುರ್ಪದಿಗೆ ನೀಡಬೇಕೆಂದು ಹಲವು ವರ್ಷಗಳಿಂದ ವಾದಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...