alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನಿಧನಕ್ಕೆ ವಿಶಿಷ್ಟ ರೀತಿಯ ಶ್ರದ್ದಾಂಜಲಿ

ವಿಶ್ವ ವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಮಾರ್ಚ್ 14 ರಂದು ಕೇಂಬ್ರಿಡ್ಜ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 76 ವರ್ಷದ ಸ್ಟೀಫನ್ ಹಾಕಿಂಗ್ ರ ನಿಧನಕ್ಕೆ ವಿಶ್ವದೆಲ್ಲೆಡೆ ಶ್ರದ್ದಾಂಜಲಿ ಸಲ್ಲಿಸಲಾಗುತ್ತಿದೆ.

ಸ್ಟೀಫನ್ ಹಾಕಿಂಗ್ 21 ನೇ ವಯಸ್ಸಿನಲ್ಲಿದ್ದಾಗ amyotrophic lateral sclerosis (ALS) ಹೆಸರಿನ ಗಂಭೀರ ಖಾಯಿಲೆ ಅವರನ್ನು ಕಾಡಿದ್ದು, ವೈದ್ಯರು ಇನ್ನೆರಡು ವರ್ಷ ಮಾತ್ರ ನೀವು ಬದುಕಿರ್ತಿರಾ ಎಂದು ಹೇಳಿದ್ದರು.

ಆದ್ರೆ ಖಾಯಿಲೆಗೆ ಸೆಡ್ಡು ಹೊಡೆದ ಸ್ಟೀಫನ್ ಹಾಕಿಂಗ್ ವಿಜ್ಞಾನ ಲೋಕದಲ್ಲಿ ಸಂಶೋಧನೆಯನ್ನು ಮುಂದುವರಿಸಿದ್ದರಲ್ಲದೇ ಭೌತ ವಿಜ್ಞಾನ ಲೋಕದಲ್ಲಿ ಅಪಾರ ಸಾಧನೆ ಮಾಡಿದ್ದರು.

ಸ್ಟೀಫನ್ ಹಾಕಿಂಗ್ ರ ನಿಧನಕ್ಕೆ ಎಲ್ಲೆಡೆ ಶ್ರದ್ದಾಂಜಲಿ ಸಲ್ಲಿಸುತ್ತಿರುವ ಮಧ್ಯೆ ಖ್ಯಾತ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ವಿಶಿಷ್ಟ ರೀತಿಯಲ್ಲಿ ಅಗಲಿದ ವಿಜ್ಞಾನಿಗೆ ಗೌರವ ಸಲ್ಲಿಸಿದ್ದಾರೆ. ಒರಿಸ್ಸಾದ ಪುರಿ ಕಡಲ ತೀರದಲ್ಲಿ ಸ್ಟೀಫನ್ ಹಾಕಿಂಗ್ ರ ಮರಳು ಶಿಲ್ಪ ರಚಿಸಿರುವ ಸುದರ್ಶನ್ ಪಟ್ನಾಯಕ್ ತಮ್ಮ ಅಂತಿಮ ನಮನ ಸಲ್ಲಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...