alex Certify
ಕನ್ನಡ ದುನಿಯಾ       Mobile App
       

Kannada Duniya

“ನಟಿ ಶ್ರೀದೇವಿಯದ್ದು ಸಹಜ ಸಾವಲ್ಲ, ಕೊಲೆ’’

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಸಾವಿಗೆ ದಿನಕ್ಕೊಂದು ತಿರುವು ಸಿಕ್ತಿದೆ. 48 ಗಂಟೆಯಲ್ಲಿ ಮೂರು ಬಾರಿ ಸಾವಿನ ಕಾರಣವನ್ನು ತಿದ್ದಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸ್ವಾಮಿ, ಶ್ರೀದೇವಿಯದ್ದು ಸಹಜ ಸಾವಲ್ಲ, ಕೊಲೆ ಎಂದು ಆರೋಪ ಮಾಡಿದ್ದಾರೆ.

ಎ ಎನ್ ಐ ಜೊತೆ ಮಾತನಾಡಿದ ಸ್ವಾಮಿ ಐದು ಪ್ರಶ್ನೆಗಳನ್ನು ದುಬೈ ಪೊಲೀಸ್ ಮುಂದಿಟ್ಟಿದ್ದಾರೆ. ಶ್ರೀದೇವಿ ಸಾವಿಗೆ ಸಂಬಂಧಿಸಿದಂತೆ ಹೊಟೇಲ್ ಸಿಸಿ ಟಿವಿ ದೃಶ್ಯಗಳು ಯಾಕೆ ಸಿಕ್ಕಿಲ್ಲ ಎಂದು ಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಶ್ರೀದೇವಿ ಸತ್ತ ತಕ್ಷಣ ಹೃದಯಾಘಾತವೆಂದು ಹೇಳಲಾಗಿತ್ತು. ಇದನ್ನು ಯಾರು ಸೃಷ್ಟಿ ಮಾಡಿದ್ದರು ಎಂದು ಸ್ವಾಮಿ ಕೇಳಿದ್ದಾರೆ.

ಶ್ರೀದೇವಿ ಎಂದೂ ಮದ್ಯ ಸೇವನೆ ಮಾಡುತ್ತಿರಲಿಲ್ಲ. ಅಪರೂಪಕ್ಕೆ ಎನ್ನುವಂತೆ ಅವರು ಬಿಯರ್ ಕುಡಿಯುತ್ತಿದ್ದರು. ಹಾಗಾದ್ರೆ ದೇಹದಲ್ಲಿ ಆಲ್ಕೋಹಾಲ್ ಹೇಗೆ ಬಂತು ಎಂದು ಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಶ್ರೀದೇವಿ ಕೋಣೆಯಲ್ಲಿ ಯಾರೆಲ್ಲ ಇದ್ದರು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ ಎಂದಿದ್ದಾರೆ. ಬಾಲಿವುಡ್ ನಟಿಯರು ಹಾಗೂ ದಾವೂದ್ ಸಂಬಂಧದ ಬಗ್ಗೆಯೂ ಸ್ವಲ್ಪ ಗಮನ ನೀಡಬೇಕಿದೆ ಎಂದು ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...