alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೆಡ್ ಪ್ರಿಯರಿಗೆ ಶಾಕಿಂಗ್ ನ್ಯೂಸ್

bread

ನವದೆಹಲಿ: ಆಧುನಿಕ ಜೀವನಶೈಲಿಯಿಂದಾಗಿ ಆಹಾರ ಪದಾರ್ಥಗಳು ಬದಲಾಗಿವೆ. ಕಳೆದ ವರ್ಷ ಮ್ಯಾಗಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶಗಳಿವೆ ಎಂದು ಹೇಳಲಾಗಿತ್ತು. ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಅಲ್ಲದೇ, ಕೆಲವು ರಾಜ್ಯಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶಗಳಿವೆ ಎಂಬ ಕಾರಣಕ್ಕೆ ಮ್ಯಾಗಿಯನ್ನು ನಿಷೇಧಿಸಲಾಗಿತ್ತು. ಇದೀಗ ಮತ್ತೊಂದು ಆತಂಕಕಾರಿ ವಿಷಯ ಕೇಳಿಬಂದಿದೆ. ಬ್ರೆಡ್, ಪಿಜ್ಜಾ, ಬರ್ಗರ್ ನಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಹುದಾದ ಅಂಶಗಳಿವೆ ಎಂದು ಹೇಳಲಾಗಿದೆ. ಇವುಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಬ್ರೊಮೇಡ್, ಪೊಟ್ಯಾಷಿಯಂ ಅಯೋಡೇಟ್ ರಾಸಾಯನಿಕಗಳಿರುವುದು ಪತ್ತೆಯಾದ ಹಿನ್ನಲೆಯಲ್ಲಿ ಆರೋಗ್ಯ ಸಚಿವಾಲಯ ಪರಿಶೀಲನೆ ನಡೆಸಲು ಆದೇಶ ನೀಡಿದೆ ಎನ್ನಲಾಗಿದೆ.

ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಾರ್ನ್ ಮೆಂಟ್ (ಸಿ.ಎಸ್.ಇ.) ಈ ಕುರಿತಂತೆ ಪರೀಕ್ಷೆ ನಡೆಸಿದ್ದು, ಅವುಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿವೆ. ಬ್ರೆಡ್ ತಯಾರಿಸುವ ಸಂದರ್ಭದಲ್ಲಿ ಈ ರಾಸಾಯನಿಕ ಬಳಕೆ ಮಾಡುತ್ತಿದ್ದು, ಇವುಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಬರಬಹುದಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...