alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಕೈನಲ್ಲಿ ಶೌಚಾಲಯ ಕ್ಲೀನ್ ಮಾಡಿಸಿದ ಶಿಕ್ಷಕರು

ಮಕ್ಕಳು ಶಾಲೆಗೆ ಹೋಗೋದು ವಿದ್ಯೆ-ಬುದ್ದಿ ಕಲಿತು ವಿದ್ಯಾವಂತರಾಗಲು. ಆದ್ರೆ ವಿದ್ಯೆ ಕಲಿಸುವ ಗುರುಗಳು ಮಕ್ಕಳನ್ನು ಮಲ ತೆಗೆಯಲು ಹಚ್ಚಿದ್ರೆ ದೇಶದ ಗತಿ ಏನಾಗಬೇಡ? ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಇಂಥಹ ಆಘಾತಕಾರಿ ಘಟನೆ ನಡೆದಿದೆ.

ದಾಮೋಹ್ ಜಿಲ್ಲೆಯ ಡಾಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ವಿದ್ಯೆ ಕಲಿಯಲು ಬರುವ ಮಕ್ಕಳಿಗೆ ಶೌಚಾಲಯ ಸ್ವಚ್ಛ ಮಾಡುವ ಕೆಲಸ ನೀಡಿದ್ದಾರೆ. ಮೊದಲು ಶಾಲೆಯ ಆವರಣ ಸ್ವಚ್ಛಗೊಳಿಸುವಂತೆ ಹೇಳಿದ ಶಿಕ್ಷಕರು ನಂತ್ರ ಶೌಚಾಲಯ ಸ್ವಚ್ಛಗೊಳಿಸಲು ಹೇಳಿದ್ದಾರೆ. ನಂತ್ರ ಶೌಚಾಲಯದ ಹೊಲಸನ್ನು ಬೇರೆಡೆ ಸಾಗಿಸುವಂತೆ ಒತ್ತಡ ಹೇರಿದ್ದಾರೆ.

ಮಧ್ಯಾಹ್ನದ ಊಟಕ್ಕೆ ಬಳಸುವ ಪ್ಲೇಟ್ ನಲ್ಲಿ ಕೊಳಕನ್ನು ಬೇರೆ ಕಡೆ ಸಾಗಿಸುವಂತೆ ಶಿಕ್ಷಕರು ಹೇಳಿದ್ದಾರೆ ಎನ್ನಲಾಗಿದೆ. ವಿಷ್ಯ ತಿಳಿದ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...