alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳು ಮಾಡ್ತಿದ್ದಾರೆ ಒಂದೊಳ್ಳೆ ಕಾರ್ಯ

students-sell-old-papers-buy-blankets-for-the-poorಹೈದರಾಬಾದಿನ ಮಿಯಾಪುರ್ ಮತ್ತು ಸಿರಿಲಿಂಗಂಪಲ್ಲಿಯ ಬಿ.ಟೆಕ್ ವಿದ್ಯಾರ್ಥಿಗಳ ಎರಡು ತಂಡ ಮಾಡುತ್ತಿರುವ ಸಾಮಾಜಿಕ ಕಾರ್ಯ ಎಲ್ಲರ ಗಮನ ಸೆಳೆದಿದೆ. ಮೈ ನಡುಗುವ ಚಳಿಯಲ್ಲಿ ಬೀದಿ ಬದಿಯಲ್ಲಿ ವಾಸವಾಗಿರುವ ಬಡ ಜನತೆಗೆ ನೆರವಾಗುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

‘ಯೂತ್ ಫಾರ್ ನೇಶನ್’ ಎಂಬ ಸಂಘಟನೆ ಮಾಡಿಕೊಂಡಿರುವ ಈ ವಿದ್ಯಾರ್ಥಿಗಳಿಗೆ, ಬೀದಿ ಬದಿ ನೆಲೆಸಿರುವ ಬಡ ಜನ ಚಳಿಯಿಂದ ಪಾರಾಗಲು ಪೇಪರ್ ನ್ನು ತಮ್ಮ ಮೈಗೆ ಸುತ್ತಿಕೊಂಡಿದ್ದನ್ನು ನೋಡಿ ಮನ ಕರಗಿದೆ.

ಇಂತವರಿಗೆ ನೆರವಾಗಲು ಮುಂದಾದ ವಿದ್ಯಾರ್ಥಿಗಳು, ತಾವು ವಾಸವಿದ್ದ ಕಾಲೋನಿ ನಿವಾಸಿಗಳಿಂದ ಹಳೆ ಪೇಪರ್ ಸಂಗ್ರಹಿಸಿ ಅದನ್ನು ಮಾರಾಟ ಮಾಡಿದ್ದಾರೆ. ಒಂದು ತಂಡ 1000 ಕೆ.ಜಿ. ಪೇಪರ್ ಸಂಗ್ರಹಿಸಿ 10 ಸಾವಿರ ರೂ. ಸಂಗ್ರಹಿಸಿದ್ದರೆ ಮತ್ತೊಂದು ತಂಡ ತಾವು ಸಂಗ್ರಹಿಸಿದ್ದ 430 ಕೆ.ಜಿ. ಹಳೆ ಪೇಪರ್ ಮಾರಿ 4 ಸಾವಿರ ರೂ. ಸಂಗ್ರಹಿಸಿದೆ. ಈ ಹಣದಿಂದ ಬ್ಲಾಂಕೆಟ್ ಖರೀದಿಸಿ ಬೀದಿ ಬದಿಯಲ್ಲಿ ವಾಸಿಸುವ ಬಡವರಿಗೆ ನೀಡುವ ಮೂಲಕ ನೆರವಾಗಿದ್ದಾರೆ. ಇವರುಗಳ ಕಾರ್ಯಕ್ಕೆ ಈಗ ಸಾರ್ವಜನಿಕರೂ ಕೈಜೋಡಿಸಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...