alex Certify
ಕನ್ನಡ ದುನಿಯಾ       Mobile App
       

Kannada Duniya

ಎಮ್ಮೆಯಿಂದಲೇ ಉದ್ಘಾಟನೆಯಾಯ್ತು ವಿದ್ಯಾರ್ಥಿ ಸಂಘ

buffelo

ವಿದ್ಯಾರ್ಥಿ ಸಂಘವೆಂದರೆ ಆಯಾ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳು ರಚಿಸಿಕೊಳ್ಳುವ ಸಂಘ. ಇದರ ಮೂಲಕ ಹಲವಾರು ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೇ, ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳಲಾಗುವುದು.

ಹಾಗಾಗಿ ವಿದ್ಯಾರ್ಥಿ ಸಂಘಗಳಿಗೆ ಕಾಲೇಜುಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಇಂತಹ ವಿದ್ಯಾರ್ಥಿ ಸಂಘವನ್ನು ಎಮ್ಮೆಯೊಂದು ಉದ್ಘಾಟನೆ ಮಾಡಿದ ವಿಲಕ್ಷಣ ಘಟನೆ ರಾಜಸ್ತಾನದಲ್ಲಿ ನಡೆದಿದೆ. ರಾಜಸ್ತಾನದ ಕೋಟಾದಲ್ಲಿರುವ ಸರ್ಕಾರಿ ವಾಣಿಜ್ಯ ಕಾಲೇಜಿನಲ್ಲಿ ಈ ರೀತಿಯ ವಿಲಕ್ಷಣ ಪ್ರಸಂಗ ನಡೆದಿದೆ. ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆದು 3 ತಿಂಗಳಾಗಿದೆ. ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಹಲವು ಬಾರಿ ಸಂಘವನ್ನು ಉದ್ಘಾಟಿಸಿ ಪ್ರಸಕ್ತ ಸಾಲಿನ ಚಟುವಟಿಕೆ ಆರಂಭಿಸಲು ಅನುಮತಿ ನೀಡಬೇಕೆಂದು ಪ್ರಾಂಶುಪಾಲರಿಗೆ ಮನವಿ ಮಾಡಿದ್ದಾರೆ.

3 ತಿಂಗಳಿಂದ ವಿದ್ಯಾರ್ಥಿ ಸಂಘ ಉದ್ಘಾಟಿಸುವಂತೆ ವಿದ್ಯಾರ್ಥಿಗಳು ಮಾಡಿದ ಮನವಿಗೆ ಪ್ರಾಂಶುಪಾಲರು ಸ್ಪಂದಿಸಿಲ್ಲ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ಎಮ್ಮೆಯೊಂದನ್ನು ಕರೆತಂದಿದ್ದಲ್ಲದೇ, ಅದಕ್ಕೆ ಪ್ರಿನ್ಸಿಪಾಲ್ ಎಂದು ಫಲಕ ನೇತುಹಾಕಿದ್ದಾರೆ. ಅದರಿಂದಲೇ ಅಣುಕು ಉದ್ಘಾಟನೆ ಮಾಡಿಸಿದ್ದಾರೆ. ಬಳಿಕ ಪ್ರಾಂಶುಪಾಲರ ಕಚೇರಿಗೆ ತೆರಳಿ ಪ್ರತಿಭಟನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...