alex Certify
ಕನ್ನಡ ದುನಿಯಾ       Mobile App
       

Kannada Duniya

6 ಮಕ್ಕಳಿಗೆ ಅಸ್ವಾಭಾವಿಕ ಲೈಂಗಿಕ ಕಿರುಕುಳ ನೀಡಿದ ಸೀನಿಯರ್ಸ್

ರೋಹ್ಟಕ್ ನ ಲಾದೌತ್ ನಲ್ಲಿರುವ ಗುರುಕುಲವೊಂದರ 6 ಮಂದಿ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಸ್ವಾಭಾವಿಕ ಲೈಂಗಿಕ ಕಿರುಕುಳ ನೀಡುತ್ತಾರೆಂದು ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಪೀಡಿತರ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ.

ಮಕ್ಕಳು ಆರಂಭದಲ್ಲಿ ವಿಷ್ಯವನ್ನು ಗುರುಕುಲದ ಅಧ್ಯಕ್ಷಕರಿಗೆ ತಿಳಿಸಿದ್ದಾರೆ. ಆದ್ರೆ ಅವ್ರು ಹೆದರಿಸಿ ಮಕ್ಕಳ ಬಾಯಿ ಮುಚ್ಚಿಸಿದ್ದಾರೆ. ರಕ್ಷಾಬಂಧನದ ವೇಳೆ ಪಾಲಕರು ಮಕ್ಕಳ ಭೇಟಿಗೆ ಬಂದಾಗ ಮಕ್ಕಳು ಅಳ್ತಾ ತಮ್ಮ ನೋವು ತೋಡಿಕೊಂಡಿದ್ದಾರಂತೆ. ಪಾಲಕರೆಲ್ಲ ಸೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಕ್ಕಳ ವೈದ್ಯಕೀಯ ಪರೀಕ್ಷೆ ವರದಿ ಬಂದ ಮೇಲೆ ತನಿಖೆ ಚುರುಕು ಪಡೆಯಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಗುರುಕುಲದಲ್ಲಿ ಹರ್ಯಾಣ ಹಾಗೂ ಪಂಜಾಬಿನ 150 ಮಕ್ಕಳು ಓದುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...