alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳಿಗೆ ಇನ್ಮುಂದೆ ಕಾಲೇಜಿನಲ್ಲೇ ಸಿಗಲಿದೆ ಲೈಸೆನ್ಸ್

ದೆಹಲಿಯ ಯುವಜನತೆಗಾಗಿ ಸರ್ಕಾರ ಹೊಸ ಆದೇಶವೊಂದನ್ನ ಜಾರಿ ಮಾಡಿದೆ. ದೆಹಲಿಯ ಕಾಲೇಜು ಮತ್ತು ಪಾಲಿಟೆಕ್ನಿಕ್ ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕಾಲೇಜಿನಲ್ಲೇ ವಾಹನ ಕಲಿಕಾ ಲೈಸೆನ್ಸ್ ಅಂದ್ರೆ ಎಲ್ ಎಲ್ ಪಡೆದುಕೊಳ್ಳಬಹುದಾಗಿದೆ. ಕಾಲೇಜು ಮತ್ತು ಪಾಲಿಟೆಕ್ನಿಕ್ ನ ಪ್ರಿನ್ಸಿಪಾಲರೇ ವಿದ್ಯಾರ್ಥಿಗಳಿಗೆ ಲರ್ನರ್ಸ್ ಲೈಸೆನ್ಸ್ ನೀಡಬಹುದಾಗಿದೆ.

ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೊಟ್ ಟ್ವಿಟ್ಟರ್ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರೇ ವಿದ್ಯಾರ್ಥಿಗಳಿಗೆ ಲೈಸೆನ್ಸ್ ನೀಡುವಂತಾ ಅಧಿಕಾರವನ್ನು ಕಾಲೇಜುಗಳಿಗೆ ನೀಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಹೀಗೆ ಕಾಲೇಜಿನಿಂದ ನೀಡಲಾದ ಲರ್ನಿಂಗ್ ಲೈಸೆನ್ಸ್ ನ ಕಾಲಾವಧಿ ಆರು ತಿಂಗಳು ಮಾತ್ರ. ಸುಮಾರು 2 ಲಕ್ಷ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಲಿದೆ ಅಂತ ಹೇಳಲಾಗ್ತಿದೆ. ಸಾರಿಗೆ ಸಚಿವರ ನಿರ್ಧಾರವನ್ನು ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದು, ಭ್ರಷ್ಟಾಚಾರ ತಡೆಗಟ್ಟುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಅಂತ ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...