alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಕ್ಕೆ ಬಂದು ಸಮುದ್ರ ಪಾಲಾದ 13 ವಿದ್ಯಾರ್ಥಿಗಳು

student death

ಮುಂಬೈ: ಅವರೆಲ್ಲಾ ಕಾಲೇಜೊಂದರ ವಿದ್ಯಾರ್ಥಿಗಳು. ಎಲ್ಲರೂ ಸೇರಿ ಪ್ರವಾಸಕ್ಕೆ ಹೋಗಿದ್ದು, ಸಮುದ್ರ ತೀರ ಕಂಡ ಕೂಡಲೇ ಖುಷಿಯಿಂದ ಓಡಿದ್ದಾರೆ. ಗೆಳೆಯರೆಲ್ಲಾ ಸಂಭ್ರಮದಿಂದ ಈಜಾಡುತ್ತಿದ್ದಾಗಲೇ ಭಾರೀ ದುರಂತವೊಂದು ನಡೆದೇ ಹೋಗಿದೆ.

ಸಮುದ್ರ ತೀರದಲ್ಲಿ ಈಜಾಡಲು ಹೋಗಿದ್ದ 13 ವಿದ್ಯಾರ್ಥಿಗಳು, ಅಲೆಗಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ನಡೆದಿದೆ. ರಾಯಗಢ ಸಮೀಪದ ಮುರುದ್ ಎಂಬಲ್ಲಿ ಅರಬ್ಬೀ ಸಮುದ್ರದಲ್ಲಿ ಈಜಾಡುತ್ತಿದ್ದ ಸಂದರ್ಭದಲ್ಲಿ 13 ವಿದ್ಯಾರ್ಥಿಗಳು ದುರಂತ ಸಾವು ಕಂಡಿದ್ದಾರೆ. ಮೃತರೆಲ್ಲಾ ಪುಣೆಯ ಇನಾಮ್ಲಾರ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಕಾಲೇಜಿನ 130 ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಿದ್ದು, ಈ ಸಂದರ್ಭದಲ್ಲಿ ಈಜಲು ಸಮುದ್ರಕ್ಕೆ ಇಳಿದಿದ್ದರು.

ಅರಬ್ಬೀ ಸಮುದ್ರದಲ್ಲಿ ಈಜಾಡುತ್ತಾ ದೂರಕ್ಕೆ ಹೋಗಿದ್ದ ಕೆಲವರು ಅಲೆಗಳಿಗೆ ಸಿಲುಕಿದ್ದು, ಅವರನ್ನು ರಕ್ಷಿಸಲು ಹೋದ ಉಳಿದವರೂ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ಕೆಲವು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...