alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಟಿ.ಎಂ. ಬಳಿ ಬಿದ್ದಿತ್ತು 24.68 ಲಕ್ಷ ರೂ…!

sbi-atm

ವಡೋದರಾ: ಹಣ ಪಡೆಯಲು ಎ.ಟಿ.ಎಂ.ಗೆ ಹೋದ ವಿದ್ಯಾರ್ಥಿಯೊಬ್ಬನಿಗೆ, ದುಡ್ಡಿನ ರಾಶಿಯೇ ಕಂಡ ಘಟನೆ ವಡೋದರಾದಲ್ಲಿ ನಡೆದಿದೆ.

ಇಲ್ಲಿನ ವಘೋಡಿಯಾ ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಎಂ.) ಎ.ಟಿ.ಎಂ.ಗೆ ಬಂದ ವಿದ್ಯಾರ್ಥಿ ಚಿರಾಗ್ ಪಟೇಲ್ ಗೆ ಅಚ್ಚರಿ ಕಾದಿತ್ತು.

2000 ರೂ. ಹಾಗೂ 500 ರೂ ನೋಟುಗಳಿದ್ದ ಬಂಡಲ್ ಗಳು ಎ.ಟಿ.ಎಂ. ಮೆಷಿನ್ ಸಮೀಪದಲ್ಲೇ ಇದ್ದವು. ಟ್ರೇನಲ್ಲಿದ್ದ ಹಣವನ್ನು ಕಂಡ ಚಿರಾಗ್ ಪಟೇಲ್, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ದರೋಡೆಕೋರರ ಕೃತ್ಯವಿರಬಹುದೆಂದು ತನಿಖೆ ಕೈಗೊಂಡಿದ್ದಾರೆ. ಆದರೆ, ಎ.ಟಿ.ಎಂಗೆ. ಹಣ ತುಂಬಬೇಕಿದ್ದ ಸಿಬ್ಬಂದಿಯೇ ಮೆಷಿನ್ ಒಳಗೆ ಹಣ ಹಾಕುವುದನ್ನು ಮರೆತು ಅಲ್ಲೇ ಬಿಟ್ಟು ಹೋಗಿದ್ದಾರೆ ಎಂಬುದು ಗೊತ್ತಾಗಿದೆ.

ಫೆಬ್ರವರಿ 23 ರಂದು ಸಿಬ್ಬಂದಿ ಹಣ ತುಂಬುವಾಗ, ನಿರ್ಲಕ್ಷ್ಯದಿಂದ ಅಲ್ಲೇ ಬಿಟ್ಟು ಹೋಗಿದ್ದಾರೆ. ಫೆ. 25 ರ ರಾತ್ರಿ ಚಿರಾಗ್ ಪಟೇಲ್ ಎ.ಟಿ.ಎಂ. ಗೆ ಬಂದು ನೋಡುವವರೆಗೂ ಹಣ ಹಾಗೆಯೇ ಅನಾಥವಾಗಿ ಬಿದ್ದಿತ್ತು.

ಇಡಲಾಗಿದ್ದ ಎಲ್ಲಾ ಹಣ ಸುರಕ್ಷಿತವಾಗಿದೆ ಒಂದು ನೋಟು ವ್ಯತ್ಯಾಸವಾಗಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ನೀಡಿದ ಚಿರಾಗ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...