alex Certify
ಕನ್ನಡ ದುನಿಯಾ       Mobile App
       

Kannada Duniya

480 ವಿದ್ಯಾರ್ಥಿನಿಯರಲ್ಲಿ 449 ಮಂದಿ ಫೇಲ್..!

download (2)

ದೆಹಲಿಯ ಯಮುನಾ ವಿಹಾರ ಬಾಲಕಿಯರ ಪ್ರೌಢ ಶಾಲೆಗೆ ಹೋಗ್ತಾ ಇದ್ದ ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. 9ನೇ ಹಾಗೂ 11ನೇ ತರಗತಿ ಪರೀಕ್ಷೆ ಬರೆದು ವಿದ್ಯಾರ್ಥಿನಿಯರು ಫಲಿತಾಂಶಕ್ಕಾಗಿ ಕಾಯ್ತಾ ಇದ್ದರು. ಆದ್ರೆ ಶಾಲೆಯಲ್ಲಿ ಬಂದ ಫಲಿತಾಂಶ ಅವರ ಕೋಪಕ್ಕೆ ಕಾರಣವಾಗಿದೆ.

ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ 480 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು. ಅದರಲ್ಲಿ 449 ವಿದ್ಯಾರ್ಥಿನಿಯರನ್ನು ಶಾಲೆ ಫೇಲ್ ಮಾಡಿದೆ. ಇದು ವಿದ್ಯಾರ್ಥಿನಿಯರು ಹಾಗೂ ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಗೆ ನುಗ್ಗಿದ ಪಾಲಕರು ದಾಂಧಲೆ ನಡೆಸಿದ್ದಾರೆ. ಇನ್ನೊಮ್ಮೆ ಉತ್ತರ ಪತ್ರಿಕೆಯನ್ನು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. 300 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಗೂ ಪಾಲಕರು ಪ್ರಿನ್ಸಿಪಾಲ್ ಕಚೇರಿಗೆ ಮುತ್ತಿಗೆ ಹಾಕಿ, ಕಿಟಕಿ ಗ್ಲಾಸ್, ಪಾಟ್ ಗಳನ್ನು ಒಡೆದು ಹಾಕಿದ್ದಾರೆ. ಕಲ್ಲು ತೂರಾಟ ಕೂಡ ನಡೆದಿದೆ.

ಪಾಲಕರ ಪ್ರತಿಭಟನೆಗೆ ಹೆದರಿದ ಶಾಲಾ ಸಿಬ್ಬಂದಿ, ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಶಾಲೆಗೆ ಪೊಲೀಸ್ ಕಾವಲಿಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ವಶಕ್ಕೆಪಡೆಯಲಾಗಿದೆ. ಪ್ರತಿ ವರ್ಷವೂ ಶಾಲೆಯಲ್ಲಿ 9ನೇ ಮತ್ತು 11ನೇ ತರಗತಿ ವಿದ್ಯಾರ್ಥಿಗಳನ್ನು ಫೇಲ್ ಮಾಡಲಾಗುತ್ತದೆಯಂತೆ. ಆದ್ರೆ ಈ ಬಾರಿ ಇದರ ಸಂಖ್ಯೆ ಹೆಚ್ಚಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...